ನಾಪೋಕ್ಲು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ಬೆಂಗಳೂರಿನ ಗಾಲ್ಫ್ ಕ್ಲಬ್ನಲ್ಲಿ ಆಯೋಜಿಸಲಾಗಿತ್ತು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಯೋಗದಲ್ಲಿ ನ.30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಗಣ್ಯರಿಂದ ಹಲವು ಸಲಹೆ ಸೂಚನೆ ವ್ಯಕ್ತವಾಯಿತು. ಅಲ್ಲದೆ ನಿರ್ಣಯಗಳನ್ನು ಚರ್ಚಿಸಿ ಎಲ್ಲರ ಸಹಮತದೊಂದಿಗೆ ಸಭೆಯಲ್ಲಿ ಅಂಗೀಕರಿಸಲಾಯಿತು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಡಾ.ರಾಜೇಶ್ ತೇನನ ಸೇರಿದಂತೆ ಕೊಡಗು ಗೌಡ ಸಮಾಜ, ಯುವ ವೇದಿಕೆ, ಬೆಂಗಳೂರಿನ ಮಹಿಳಾ ಘಟಕ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಯುವ ವೇದಿಕೆ, ದಾಸರಹಳ್ಳಿ ಹಾಗೂ ಯಲಹಂಕ ಗೌಡ ಸಮಾಜ, ಕೊಡಗು ದಕ್ಷಿಣ ಕನ್ನಡ ಗೌಡ ಕ್ರೆಡಿಟ್ ಕೋ ಸೊಸೈಟಿ, ಕೆಂಪೇಗೌಡ ರೂರಲ್ ಹೌಸಿಂಗ್ ಸೊಸೈಟಿ, ದಕ್ಷಿಣ ಕನ್ನಡ ಕ್ಷೇಮ ಅಭಿವೃದ್ಧಿ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು.