ನಂದಗುಡಿ: ಭೇದವಿಲ್ಲದೆ ನಿಜವಾದ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕಿದ್ದು, ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೊಸಕೋಟೆ ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಹೇಳಿದರು.
ಹೊಸಕೋಟೆ ತಾಲೂಕಿನ ಹೆತ್ತಕ್ಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025&26ನೇ ಸಾಲಿನ ಗ್ರಾಮ ಸಭೆಯಲ್ಲಿ ಮಾತನಾಡಿದರು.
ತಾಲೂಕಿನದ್ಯಾಂತ ನಿವೇಶನ ರಹಿತರಿಗೆ ಸುಮಾರು 326 ಎಕರೆ ಪ್ರದೇಶದಲ್ಲಿ 9 ಸಾವಿರ ನಿವೇಶನಗಳನ್ನು ಹಂಚಲಾಗುವುದು. ಇದಕ್ಕೆ ಕೆಲವು ಮಾನದಂಡಗಳಿದ್ದು, ಜಿಎಸ್ಟಿ ಹಾಗೂ ಟ್ಯಾಕ್ಸ್ ಕಟ್ಟುವವರು ಅರ್ಹರಾಗುವುದಿಲ್ಲ. ಉಳಿದ ಎಲ್ಲ ಫಲಾನಭವಿಗಳಿಗೆ ಖಂಡಿತ ಸಿಗುತ್ತದೆ. ಪಂಚಾಯಿತಿಯಲ್ಲಿ ಮನೆ ಕಟ್ಟಲು ಹಾಗೂ ಇತರ ಸೌಲತ್ತುಗಳು ಪಡೆದಿದ್ದರೆ ಆನ್ಲೈನ್ ಮುಖಾಂತರ ಅರ್ಜಿ ರದ್ದು ಆಗುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯೆ ಗೀತಾ ತ್ರಿವೇಣಿಕುಮಾರ್ ಮಾತನಾಡಿ, ಗ್ರಾಮಾಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಸ್ಥಳಿಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯೆ ಟಿ.ಎಂ.ಕಲ್ಪನಾ, ಮಾಜಿ ಉಪಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ವೀರಭದ್ರಚಾರಿ, ಕರವಸೂಲಿಗಾರ ಮಂಜುನಾಥ್, ಸಮಾಜಕಲ್ಯಾಣ ಇಲಾಖೆಯ ಪುಟ್ಟಸ್ವಾಮಿ, ಕುಡಿಯುವ ನೀರು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ತಾರಾ, ಆರೋಗ್ಯಾಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂದ ಪ್ರತಿನಿಧಿಗಳು ಭಾಗವಹಿಸಿದ್ದರು.
20ರಂದು ಸವಲತ್ತು ವಿತರಣೆ
ಹೊಸಕೋಟೆಯಲ್ಲಿ ಇ&ಸ್ವತ್ತು, ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಜು.20ರಂದು ಹಮ್ಮಿಕೊಂಡಿದ್ದು, ಪಂಚಾಯಿತಿ ವತಿಯಿದ 150 ಇ&ಸ್ವತ್ತು ಫಲಾನುಭವಿಗಳು, 94 ಮಂದಿ ಅಂಗಲವಿಕರಿಗೆ ್ಯಾನ್ ವಿತರಣೆ ಮಾಡಲಾಗುವುದು ಎಂದು ಪಿಡಿಒ ಎಸ್.ಲೋಕೆಶ್ ತಿಳಿಸಿದರು. ಅಗಸರಹಳ್ಳಿ ಬಳಿ ಸರ್ವೇ ನಂ.36 ರಲ್ಲಿ 9.20 ಎಕರೆ, ಲಿಂಗಾಪುರ ಸ.ನಂಬರ್ 38ರಲ್ಲಿ 1.10 ಎಕರೆ ಸರ್ಕಾರದಿಂದ ನಿವೇಶಗಳಿಗೋಸ್ಕರ ಮಂಜೂರಾಗಿದ್ದು. ನಿವೇಶನಗಳನ್ನ ಮಾಡಿ ಅರ್ಹ ಫಲಾನಿಭವಿಗಳಿಗೆ ಹಂಚಲಾಗುವುದು. ನರೇಗಾ ಅನುದಾನದಲ್ಲಿ ಈ ನಿವೇಶನಗಳಿಗೆ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಹಾಕಿಸಿಕೊಡಲಾಗುವುದು. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿ, ಕ್ರಿಯಾಯೋಜನೆ, ವಾರ್ಡ್ ಸಭೆಯಲ್ಲಿ ಚರ್ಚಿಸಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.