ಸವಣೂರ: ಮಾಜಿ ಮುಖ್ಯಮುಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರ 100ನೇ ಜನ್ಮದಿನದ ಅಂಗವಾಗಿ ಬೊಮ್ಮಾಯಿ ಕುಟುಂಬಸ್ಥರು ಶುಕ್ರವಾರ ತಾಲೂಕಿನ ಕಾರಡಗಿ ಗ್ರಾಮದ ಶ್ರೀವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ, ಕಾರಡಗಿ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಿಸಿ, ಅನ್ನಸಂರ್ಪಣೆ ಕೈಗೊಳ್ಳಲಾಯಿತು. ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿ. ಎಸ್.ಆರ್. ಬೊಮ್ಮಾಯಿ ಅವರೊಂದಿಗೆ ರಾಜಕೀಯ ಹಾಗೂ ಸಾಮಾಜಿಕ ಚಿಂತನೆ ಕಾರ್ಯದಲ್ಲಿ ಪಾಲ್ಗೊಂಡ ಹಿರಿಯರೊಂದಿಗೆ ಚರ್ಚಿಸಿ ವಿವಿಧ ಸ್ಥಳಗಳಲ್ಲಿ ಜನ್ಮ ಶತಮಾನೊತ್ಸವ ಆಚರಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಜೀ ಅವರೊಂದಿಗೆ ಚರ್ಚಿಸಲಾಗುವುದು. ದಿನಾಂಕ, ಸ್ಥಳವನ್ನು ಶೀಘ್ರವೇ ತೀರ್ಮಾನಿಸಲಾಗುವುದು ಎಂದರು.
ಚನ್ನಮ್ಮ ಬೊಮ್ಮಾಯಿ, ಭರತ ಬೊಮ್ಮಾಯಿ, ಪ್ರಮುಖರಾದ ಗಂಗಾಧರ ಬಾಣದ, ಶೋಭಾ ನಿಸ್ಸೀಮಗೌಡ್ರ, ಬಸವನಗೌಡ ಕೊಪ್ಪದ, ಹನುಮಂತಗೌಡ ಮುದಿಗೌಡ್ರ, ಚನ್ನಬಸಯ್ಯ ದುರ್ಗದಮಠ, ಡಿ.ಎಸ್. ಮಾಳಗಿ, ಮಂಜುನಾಥ ಉಡುಪಿ, ಮಂಜುನಾಥ ಗಾಣಗೇರ, ಶ್ರೀಪಾದಗೌಡ ಪಾಟೀಲ, ಸಂಗಪ್ಪ ಯರೇಶಿಮಿ, ಶಿವಪುತ್ರಪ್ಪ ಕಲಕೋಟಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಸನಗೌಡ ಪಾಟೀಲ, ನಿರ್ದೇಶಕ ಎಲ್.ಸಿ. ಕುರವತ್ತಿ ಇತರರು ಪಾಲ್ಗೊಂಡಿದ್ದರು.