ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡ ವಸಂತ್​ ಕುಮಾರ್​ ಮಾತನಾಡಿದರು. ಸಮಿತಿ ಮುಖಂಡರಾದ ಸತೀಶ್​ ಕುಮಾರ್​, ಮುನಿಕೃಷ್ಣ, ನರಸಿಂಹಮೂರ್ತಿ, ಕಾಳೆಗೌಡ, ವಿಜಯ್​ ಕುಮಾರ್​, ಗೋಪಾಲ್​, ರಮೇಶ್​, ರೈತ ಸಂದ ನಾರಾಯಣಸ್ವಾಮಿ ಇದ್ದರು. 
ಜಿಲ್ಲೆ

14 ರಂದು ಉಪವಾಸ ಸತ್ಯಾಗ್ರಹಕ್ಕೆ ಸಿದ್ಧತೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ಡಾ.ಅಂಬೇಡ್ಕರ್​ ಜಯಂತಿಯಂದು "ಸಂವಿಧಾನ ಉಳಿಸಿ ಕಾನೂನು ರಕ್ಷಣೆಗಾಗಿ' ೂಷಣೆಯಡಿ ಕೆರೆಗಳ ಶುದ್ಧೀಕರಣ ಮತ್ತು ಕುಡಿಯುವ ನೀರಿನ ಪೂರೈಕೆಗೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಮುಂಖಡ ವಸಂತ್​ ಕುಮಾರ್​ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ದೊಡ್ಡ ತುಮಕೂರು ಹಾಗೂ ಮಜಾರಹೊಸಹಳ್ಳಿಯ ಸಂಪೂರ್ಣ ಜೀವ ಜಲವು ಕಲುಷಿತವಾಗಿದ್ದು, ಪ್ರಸ್ತುತ ನಮ್ಮ ಭಾಗದಲ್ಲಿ ಹಲವರು ಕ್ಯಾನ್ಸರ್​ ಮತ್ತು ಕಿಡ್ನಿ ಸೇರಿ ಹಲವು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದಾರೆ. ಈ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನೆಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಏ.14 ರಂದು ಸಾಂಕೇತಿಕ ಹೋರಾಟದ ಭಾಗವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ ಎಂದರು.

ಸಮಿತಿ ಒತ್ತಾಯಗಳು :

1. ದೊಡ್ಡ ತುಮಕೂರು ಗ್ರಾಪಂ ಹಾಗೂ ಮಜರಾಹೊಸಳ್ಳಿ ಗ್ರಾಪಂಗೆ ಕುಡಿಯಲು ಮಳೆ ನೀರು ಕೊಯ್ಲು ಯೋಜನೆ ಮಾಡಿಕೊಡಬೇಕು.

2. ಕುಡಿಯುವ ನೀರಿಗೆ ಪಕ್ಕದ ಪಂಚಾಯಿತಿಯಿಂದ ಕೊಳವೆ ಬಾವಿ ಕೊರೆಸಬೇಕು.

3. ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪ.ಪಂ ಬಿಡುವ ಕೊಳಚೆನೀರಿಗೆ ಮೂರನೇ ಹಂತದ ಶುದ್ಧೀಕರಣ ಟಕ ಸ್ಥಾಪಿಸಬೇಕು.

4. ಕಾನೂನು ವಿರುದ್ಧವಾಗಿ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

5. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು.

6. ಕೈಗಾರಿಕೆಗಳಿಗೆ ಕೊಳವೆಬಾವಿ ಕೊರೆಯಲು ಇನ್ನು ಮುಂದೆ ಅನುಮತಿ ಕೊಡಬಾರದು. ?ಕೊಳವೆ ಬಾವಿಗಳಿಗೆ ಕೊಳಚೆ ನೀರನ್ನು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.