ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಶ್ರೀ ಸಿಂಗಮ್ಮದೇವಿ ದೇಗುಲ. 
ಜಿಲ್ಲೆ

ಶ್ರೀ ಸಿಂಗಮ್ಮದೇವಿ ದೇಗುಲ ಲೋಕಾರ್ಪಣೆಗೆ ಸಿದ್ಧತೆ

ಹಿರೀಸಾವೆ: ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಸಿಂಗಮ್ಮದೇವಿ ದೇಗುಲದ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಮೇ 23 ಹಾಗೂ ಮೇ 24ರಂದು ನಡೆಯಲಿದೆ.

23ರ ಗುರುವಾರ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1946ನೇ ಶ್ರೀ ಕ್ರೋವಿನಾಮ ಸಂಚತ್ರರ ಉತ್ತರಾಯಣೆ ವಸಂತಯತು ವೈಶಾಖ ಮಾಸ ಕೃಷ್ಣ ಪಕ್ಷದ ಶುಭ ಗೋಧೂಳಿ ಲಗ್ನದಲ್ಲಿ ನೂತನ ವಿಗ್ರಹವನ್ನು ಗಂಗಾಪೂಜೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ರಪದ ಮೂಲಕ ವಾದ್ಯ-ವೈಭವಗಳೊಂದಿಗೆ ಮೆರೆಸಿ ನೂತನ ಆಲಯವನ್ನು ಗೋ-ದೇವರ ಹಾಗೂ ಗುರುಗಳೊಂದಿಗೆ ಪ್ರವೇಶ ಕಾರ್ಯಕ್ರಮ ನೆರವೇರಲಿದೆ.

ನಂತರ ವಿಗ್ರಹ ಪ್ರತಿಷ್ಠಾಪನಾ ಅಂಗವಾಗಿ ಗಣಪತಿ ಪೂಜೆ, ಪುಣ್ಯ, ನಾಂದಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗ ಹೋಮ, ರುದ್ರ ಹೋಮ ಹವನಾದಿ ಕಾರ್ಯಕ್ರಮಗಳು ನೆರವೇರಿಸಿ ನೂತನ ವಿಗ್ರಹಕ್ಕೆ ಸಂಸ್ಕಾರಾದಿ ಕಾರ್ಯಗಳು ಜರುಗಲಿವೆ.

ಸಂಸ್ಕರಿಸಿದ ನೂತನ ವಿಗ್ರಹವನ್ನು ಮೇ 24ರಂದು ಬೆಳಗ್ಗಿನ ಬ್ರಾಹ್ಮೀ ಮೂಹೂರ್ತದಲ್ಲಿ ಗುರುಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಕೈಗೊಳ್ಳಲಾಗುವುದು. ನೂತನ ವಿಗ್ರಹಕ್ಕೆ ದೈವತ್ವ ಪ್ರಾಪ್ತಗೊಸ್ಕರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ತೈಲಾಭಿಷೇಕ ನೆರವೇರಿಸಿ ನೇತ್ರೋಯ್ಯಲಿನ, ದೃಷ್ಟಿದೋಷ ನಿವಾರಣೆ ಕದಲಭೇಧನ, ಕುಷ್ಕಾಂಡ ಏಕಶಾಂತಿ ನೆರವೇರಿಸಿ ನಂತರ ಮಹಾ ಪೂರ್ಣಾಹುತಿಯೊಂದಿಗೆ ಪೂರ್ಣಗೊಳ್ಳಲಿದೆ.
24 ರಂದು ಬೆಳಗ್ಗೆ ವೈದ್ಯರಾದ ಡಾ.ಬಿ.ಎಸ್.ಜಯರಾಂ ಬಾಳಗಂಚಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಕೀಲು ಮತ್ತು ಮೂಳೆ ಚಿಕಿತ್ಸೆ, ಇಸಿಜಿ ಮತ್ತು ಎಕೋ ದಂತಚಿಕಿತ್ಸೆ, ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ, ಮಕ್ಕಳ ಚಿಕಿತ್ಸೆ ಹಾಗೂ ಉಚಿತ ಔಷಧ ವಿತರಣೆ ಇರಲಿದೆ.

ಮೇಲ್ಕಂಡ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ನುಗ್ಗೇಹಳ್ಳಿ-ಅಯ್ಯನಹಳ್ಳಿ ಪುರವರ್ಗ ಹಿರೇಮಠದ ಡಾ. ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ. ಅಮ್ಮನವರಿಗೆ ಅಷ್ಟೋತ್ತರ ಕುಂಕುಮಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಲಲಿತ್ ರಾಘವ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಸಿಂಗಮ್ಮ ದೇವಿ ಟ್ರಸ್ಟ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಶ್ರೀ ಸಿಂಗಮ್ಮದೇವಿ ದೇಗುಲ.