ಜಿಲ್ಲೆ

ಹಾನಿ ತಡೆಗೆ ಪೂರ್ವತಯಾರಿ ಅಗತ್ಯ

ಗಾಯತ್ರಿ ಮಾಲಿಪಾಟೀಲ್

ಕುರುಗೋಡು: ಮುಂಗಾರು ಮೊದಲ ಹಂತದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಅಧಿಕಾರಿಗಳು ಮುಂಗಾರು ಪರಿಣಾಮವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪದಡಿ ಮುಂಗಾರು ಮಳೆ ಕುರಿತು ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ನೈಋತ್ಯ ಮಾನ್ಸೂನ್ ಋತುವಿನ ಮೊದಲ ಹಂತದ ದೀರ್ಘಾವಧಿ ಮುನ್ಸೂಚನೆ, ಅನಿಯಮಿತ ವಿತರಣೆ ಹಾಗೂ ತೀವ್ರತೆಯ ಏರಿಳಿತದಿಂದ ಮಳೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ತಾಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಲ್ಲಿ ಸಂಭವಿಸಬಹುದಾದ ಹಾನಿಯನ್ನು ಎದುರಿಸಲು ಹಾಗೂ ತಗ್ಗಿಸಲು ಪೂರ್ವ ಸಿದ್ಧತೆ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಟಾಸ್ಕ್ ಪೋರ್ಸ್ ಸಮಿತಿ ಕರ್ತವ್ಯ ಅರಿತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ತಾಪಂ ಕಾರ್ಯನಿರ್ವಹಕ ಅಧಿಕಾರಿ ಕೆವಿ ನಿರ್ಮಲಾ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಉಪ ತಹಸೀಲ್ದಾರ್ ವಿಜಯ ಕುಮಾರ್ ಇತರರಿದ್ದರು.