ಮಂಗಳೂರು: ಕರೋನ ಬಳಿಕ ಮಂಗಳೂರು ವಿವಿ ಶೈಕ್ಷಣಿಕ ವೇಳಾಪಟ್ಟಿ ಬದಲಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಗಸ್ಟ್ ಮೊದಲ ವಾರ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಾಗಿದೆ ಎಂದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.
ಬುಧವಾರ ವಿವಿ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ವಿವಿ ಶೈಕ್ಷಣಿಕ ಸಭೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಂಗಳೂರು ವಿವಿಯ ಎರಡನೇ, ನಾಲ್ಕನೇ ಹಾಗೂ ಆರನೇ ಸೆಮಿಸ್ಟರ್‌ನ ಪರೀಕ್ಷೆಗಳು ಜೂ.24ರಿಂದ ಆರಂಭವಾಗಲಿದ್ದು, ಜು.31ರ ವರೆಗೆ ನಡೆಯಲಿದೆ. ಇದರಲ್ಲಿ ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿಕೊಂಡು ಮೌಲ್ಯಮಾಪನವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದ್ದು, ಆಗಸ್ಟ್‌ನ ಮೊದಲ ವಾರದಲ್ಲಿ ಪದವಿ ಕೋರ್ಸ್‌ಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
*17 ಕಾಲೇಜುಗಳಿಂದ ಸಂಯೋಜನೆಗೆ ಹಿಂದೇಟು
ಮಂಗಳೂರು ವಿವಿ ಅಡಿಯಲ್ಲಿರುವ 150 ಕಾಲೇಜುಗಳು ಸಂಯೋಜನೆಗೆ ಅರ್ಜಿ ಸಲ್ಲಿಸಿದ್ದು, ಉಳಿದಂತೆ 17 ಕಾಲೇಜುಗಳು 2024-25ನೇ ಸಾಲಿನಲ್ಲಿ ಪ್ರವೇಶಾತಿಗಾಗಿ ವಿವಿಯ ಸಂಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಮಂಗಳೂರು ವಿವಿಯಡಿಯಲ್ಲಿ 178 ಒಟ್ಟು ಕಾಲೇಜುಗಳಿದ್ದು, ಇದರಲ್ಲಿ 7 ಸ್ವಾಯತ್ತ ಹಾಗೂ ವಿವಿ ಸಂಯೋಜಿತ ಕಾಲೇಜುಗಳು 5 ಇದ್ದು, ಉಳಿದಂತೆ 17 ಕಾಲೇಜುಗಳು ಈ ಬಾರಿ ಪ್ರಥಮ ವರ್ಷದ ಪದವಿ ತರಗತಿ ಆರಂಭಿಸಲು ಉತ್ಸುಕತೆ ತೋರಿಸಿಲ್ಲ. ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಇರುವುದರಿಂದ ಇವರು ಸಂಯೋಜನೆಗೆ ಮುಂದಾಗಿಲ್ಲ, ಆದರೆ ಎರಡನೇ ಹಾಗೂ ಮೂರನೇ ವರ್ಷದ ಪದವಿ ತರಗತಿಗಳು ಇಲ್ಲಿ ಸಾಗಲಿದೆ. ಮುಂದುವರಿಕೆ ಸಂಯೋಜನೆಯಲ್ಲಿ ಈ ಬಾರಿ 136 ಕಾಲೇಜುಗಳು, ವಿಸ್ತರಣಾ ಸಂಯೋಜನೆಯಲ್ಲಿ 36, ಶಾಶ್ವತ ಸಂಯೋಜನೆಯಲ್ಲಿ 29 ಕಾಲೇಜುಗಳು ಹಾಗೂ ಹೊಸ ಶಾಶ್ವತ ಸಂಯೋಜನೆಯಲ್ಲಿ 5 ಕಾಲೇಜುಗಳು ಅರ್ಜು ಸಲ್ಲಿಸಿದ್ದು ಅನುಮೋದನೆಯನ್ನು ನೀಡಲಾಗಿದೆ ಎಂದರು.
*ವಿವಿ ಶೈಕ್ಷಣಿಕ ಸಭೆಯಲ್ಲಿ ಅನುಮೋಧನೆ
ಸ್ನಾತಕೋತ್ತರ ವಾಣಿಜ್ಯ ಕಾರ‌್ಯಕ್ರಮದಲ್ಲಿ ವಿದ್ಯಾರ್ಥಿ ಪ್ರವೇಶಾತಿಗೆ ತಿದ್ದುಪಡಿ ಅನುಮೋದನೆ ನೀಡಲಾಗಿದ್ದು, ಮಂಗಳೂರು ವಿವಿಯ ಸ್ವಾಯತ್ತ ಕಾಲೇಜಾದ ಶ್ರೀಮಂಜುನಾಥೇಶ್ವರ ಕಾಲೇಜಿನಲ್ಲಿ ಬಿ.ವೋಕ್ ಮಾಡಿದವರಿಗೆ ಎಂಕಾಂ ಪ್ರವೇಶಾತಿಯಲ್ಲಿ ಈ ಕೋರ್ಸ್ ಮಾಡಿದವರಿಗೆ ಅದ್ಯತೆ ನೀಡಲುನ ಅನುಮೋದನೆ ನೀಡಲಾಯಿತು. ಬಿಎಸ್ಸಿ-ಎ್ಎನ್‌ಡಿಯಲ್ಲಿ ಪ್ರವೇಶಾತಿಯಲ್ಲಿ ಅರ್ಹತೆಯ ವಿಚಾರದಲ್ಲಿ ಈ ಹಿಂದಿನ ನಿಯಮಗಳನ್ನು ಪಾಲನೆ ಮಾಡಬೇಕು. ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜು, ತ್ರಿಶಾ ಕಾಲೇಜು ಆ್ ಮ್ಯಾನೇಜ್‌ಮೆಂಟ್ ಮತ್ತು ಸಂಧ್ಯಾ ಕಾಲೇಜುಗಳ ಸ್ಥಳ ಬದಲಾವಣೆಗೆ ಅನುಮೋದನೆ ನೀಡಲಾಯಿತು.
ವಿವಿ ರಿಜಿಸ್ಟ್ರಾರ್ ಕೆ. ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಡಾ.ಎಚ್. ದೇವೇಂದ್ರಪ್ಪ, ಹಣಕಾಸು ಅಕಾರಿ ಡಾ. ಸಂಗಪ್ಪ ವೈ ಉಪಸ್ಥಿತರಿದ್ದರು.
----------------------
ಸಂತ ಫಿಲೋಮಿನಾಗೆ ಸ್ವಾಯತ್ತ ಸ್ಥಾನಮಾನ
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡುವುದು, 2024-25ನೇ ಸಾಲಿಗೆ ಶೈಕ್ಷಣಿಕ ಮಂಡಳಿ ಸಮಿತಿಯನ್ನು ರಚಿಸುವುದು, ಸ್ನಾತಕೋತ್ತರ ಕಾರ‌್ಯಕ್ರಮಗಳ ಪಠ್ಯಕ್ರಮಗಳಿಗೆ ಸಂಬಂಧಿಸಿ ಔಟ್‌ಕಮ್ ಮತ್ತು ಗ್ರ್ಯಾಜುವೇಟ್ ಆ್ಯಟ್ರೀಬ್ಯೂಟ್‌ಗಳ ಅಧಿಸೂಚನೆ ಅನುಮೋದನೆ, ನಂತೂರಿನ ಶ್ರೀಭಾರತಿ ಕಾಲೇಜಿನ ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸ ಸಂಯೋಜನೆಯಾದ ಬಿಕಾಂ( ಬ್ಯುಸಿನೆಸ್ ಡಾಟಾ ಅನಾಲಿಟಿಕ್ಸ್)ಗೆ ಮಂಜೂರಾತಿಯನ್ನು ನೀಡಲಾಯಿತು.