filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46; 
ಜಿಲ್ಲೆ

ಅದ್ದೂರಿ ರಾಜ್ಯೋತ್ಸವಕ್ಕೆ ಸಿದ್ಧತೆ

ಕಾಗವಾಡ: ಮರಾಠಿ ಭಾಷಿಕರೆ ಅಧಿಕವಾಗಿರುವ ಮಂಗಸೂಳಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನ.1ರಂದು ಕರಾಳ ದಿನ ಆಚರಿಸಲಾಗುತ್ತಿತ್ತು. ಆದರೆ, ಸ್ಥಳಿಯ ಎಲ್ಲ ಕನ್ನಡಿಗರ ಸಹಕಾರದಿಂದ ನಾಲ್ಕು ವರ್ಷಗಳಿಂದ ಅದ್ದೂರಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್​ ರಾಜೇಶ ಬುರ್ಲಿ ಹೇಳಿದರು.

ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಏರ್ಪಡಿಸಿದ್ದ ಶಾಂತಿ ಪಾಲನೆ ಹಾಗೂ ಪೂರ್ವಭಾವಿ ಸಭೆಯ ಅಧ್ಯತೆ ವಹಿಸಿ ಮಾತನಾಡಿದ ಅವರು, ಈ ವರ್ಷವೂ ಮಂಗಸೂಳಿಯಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪಿಎಸ್​ಐ ಜಿ.ಜಿ.ಬಿರಾದಾರ ಮಾತನಾಡಿ, ಸೌಹಾರ್ದತೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಸರ್ಕಾರದ ನಿಯಮಾವಳಿ ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದರು. ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿದರು. ವರ್ತಕರ ಸಂದ ಅದ್ಯ ಜಯಸಿಂಗ ಪಾಟೀಲ, ಗ್ರಾಪಂ ಅಧ್ಯ ಬಾಳು ಭಜಂತ್ರಿ, ಪಿಡಿಒ ಸಂಜೀವ ಸೂರ್ಯವಂಶಿ, ಗ್ರಾಮ ಆಡಳಿತಾಧಿಕಾರಿ ಪರಾಗ ಕಾಂಬಳೆ, ಕರವೇ ಅಧ್ಯ ದತ್ತಾತ್ರೇಯ ಪೂಜಾರಿ, ಪಿಕೆಪಿಎಸ್​ ಅಧ್ಯ ಮುಕುಂದ ಪೂಜಾರಿ, ಗ್ರಾಪಂ ಸದಸ್ಯರಾದ ಪ್ರಮೋದ ಪೂಜಾರಿ, ಬಾಬಾ ಪಾಟೀಲ, ಸಾವಂತ ಅಧೋಕೆ, ಮಿರಾಸಾಬ ಸನದಿ, ಗಣಪತಿ ಮಾಳಿ ಇತರರಿದ್ದರು.