ಜಿಲ್ಲೆ

ಜಿಲ್ಲಾ ಮಟ್ಟದ ಆರ್ಯ ವೈಶ್ಯ ಸಮಾವೇಶಕ್ಕೆ ಸಿದ್ಧತೆ

ತಿಪಟೂರು : ನಗರದಲ್ಲಿ ಜು.20 ರಂದು ನಡೆಯುವ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದೆ ಎಂದು ಜಿಲ್ಲಾಧ್ಯಕ್ಷ ಎಲ್​. ಆರ್​.ಚಂದ್ರಶೇಖರ್​ ತಿಳಿಸಿದರು. ನಗರದಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು, 117 ವರ್ಷಗಳ ಇತಿಹಾಸವಿರುವ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಸಮಾಜದ ಅಶಕ್ತರಿಗೆ ನೆರವಾಗುತ್ತಾ ಬಂದಿದೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಧ್ಯಾ ಶ್ರೀ ಯೋಜನೆಯಡಿ 65 ವರ್ಷ ಮೇಲ್ಪಟ್ಟ ವಿಧವೆಯರಿಗೆ ಮಾಶಸನ, ಅಂಗವಿಕಲರಿಗೆ ನೆರವು, ವಿದ್ಯಾರ್ಥಿಮಿತ್ರ ಯೋಜನೆಯಡಿ ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ 5 ವರ್ಷದವರೆಗೂ 5 ಲಕ್ಷ ರೂ.ಬಡ್ಡಿ ರಹಿತ ಸಾಲ, ಅಮರಜ್ಯೋತಿ ಯೋಜನೆಯಡಿ ಸಮಾಜದ ಸಂತ್ರಸ್ತ ಬಡ ಕುಟುಂಬಕ್ಕೆ 5 ಲಕ್ಷರೂ.ಆರ್ಥಿಕ ಸಹಾಯ, ಮಹಿಳಾ ಸಬಲೀಕರಣ, ಕೌಶಲ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳು ಸೇರಿ 20 ಕ್ಕೂ ಹೆಚ್ಚು ಯೋಜನೆಗಳ ಮೂಲಕ ಆರ್ಯವೈಶ್ಯ ಸಮಾಜಕ್ಕೆ ನೆರವಾಗುತ್ತಿದೆ. ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಾವೇಶವನ್ನು ನಗರದಲ್ಲಿ ನಡೆಸಲು ಸಕಲ ಸಿದ್ಧತೆ ನಡೆದಿವೆ ಎಂದರು.

ಜು.20 ರಂದು ಬೆಳಗ್ಗೆ 10ಕ್ಕೆ ಶಾಸಕ ಕೆ.ಷಡಕ್ಷರಿ ಸಮಾರಂಭ ಉದ್ಘಾಟಿಸಲಿದ್ದು, ರಾಜ್ಯಾಧ್ಯಕ್ಚ ಆರ್​.ಪಿ.ರವಿಶಂಕರ್​ ರಿಂದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆ ಜಿಲ್ಲಾಧ್ಯಕ್ಷ ಎಲ್​.ಆರ್​.ಚಂದ್ರಶೇಖರ್​ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೊಮಣ್ಣ, ತುಮಕೂರು ವಿವಿ.ಉಪಕುಲಪತಿ ಡಾ.ಎಂ. ವೆಂಕಟೇಶ್ವರುಲು, ಅಖಿಲ ಭಾರತ ಶ್ರೀವಾಸವಿ ಪೆನಗೊಂಡ ಟೆಂಪಲ್​ ಟ್ರಸ್ಟ್​ ಪಶ್ಚಿಮ ಗೋದಾವರಿಯ ಡಾ.ವಿ.ಎನ್​.ಗೋವಿಂದರಾಜು ಭಾಗವಹಿಸಲಿದ್ದಾರೆ ಎಂದು ತಾಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಾಗೇಪಲ್ಲಿ ನಟರಾಜು ತಿಳಿಸಿದರು.