ಶಿವಾನಂದ ಹಿರೇಮಠ ಗದಗ,
ಸಾಧನೆ ಯಾರ ಸ್ವತ್ತು ಅಲ್ಲ. ಅದು ಸಾಧನೆ ಮಾಡಿದವರ ಸ್ವತ್ತು ಎಂಬುದಕ್ಕೆ ಗದಗ ನಗರದ ಕುಸ್ತಿಪಟು ಪ್ರೇಮಾ ಹುಚ್ಚನ್ನವರ ಸಾ. ಕುಸ್ತಿಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಈ ಚಿನ್ನದ ಹುಡಗಿ ಕಡುಬಡತನದಲ್ಲಿ ಅರಳಿ ನಿಂತ ಪ್ರತಿಭೆ. ಇವರ ಸಾಧನೆಗೆ ಹತ್ತಾರು ಪ್ರಶಸ್ತಿಗಳು ಹುಡುಕಿ ಮನೆ ಬಾಗಿಲಿಗೆ ಬಂದಿವೆ.
ಗದಗ ತಾಲೂಕಿನ ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರ್ ತನ್ನ 23ನೇ ವಯಸ್ಸಿನಲ್ಲಿ ಕುಸ್ತಿಯಲ್ಲಿ ಪರಿಶ್ರಮದ ಮೂಲಕ ಉತ್ತುಂಗಕ್ಕೇರಿದ ಕ್ರೀಡಾಪಟು. ಅಸುಂಡಿ ಗ್ರಾಮದ ಪ್ರೇಮಾ ಹುಚ್ಚನ್ನವರ ಅವರಿಗೆ ಕರ್ಮ ಭೂಮಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮ. ಲಕ್ಕುಂಡಿ ಗ್ರಾಮದ ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಅವರ ಗರಡಿಯಲ್ಲಿ ಪಳಗಿದ ಪ್ರೇಮಾ, ದಣ ಭಾರತದ ಕುಸ್ತಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ಸಂಪಾದಿಸಿದ್ದಾರೆ. ಅಸುಂಡಿ ಗ್ರಾಮದ ರಮೇಶರಡ್ಡಿ ಹುಚ್ಚಣ್ಣವರ ಹಾಗೂ ಯಲ್ಲಮ್ಮ ದಂಪತಿಗೆ ಹಿರಿಯ ಮಗಳಾದ ಪ್ರೇಮಾ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ, ತಂದೆ ಹಾಗೂ ತಾಯಿ ಕೃಷಿಯಲ್ಲಿ ತೋಡಗಿದ್ದರಿಂದ ಸಾಧನೆಯ ಹಾದಿ ಕಷ್ಟವಾಗಿತ್ತು. ಚಲಬಿಡದ ಪ್ರೇಮಾ ನಿರಂತರ ಪರಿಶ್ರಮದಿಂದ ಸಾಧನೆಯ ಶಿಖರ ಮುಟ್ಟಿದ್ದಾರೆ.
ಸಾಧನೆಗಳು:- 2012ರಲ್ಲಿ ಕಿಜಿರ್ಸ್ತಾನ್ನಲ್ಲಿ ನಡೆದ ಕೆಡಿಟ್ ಏಷಿಯನ್ ರೆಸ್ಲಿಂಗ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ.- 2012ರಲ್ಲಿ ನಡೆದ ಅಜರ್ ಬೈಜಾನ್ ಕೆಡಿಟ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಕಂಚಿನ ಪದಕ.- ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ.- ಆಳ್ವಾಸ್ ನುಡಿಸಿರಿ ರಾಜ್ಯಮಟ್ಟದ ಕುಸ್ತಿಯಲ್ಲಿ ಚಿನ್ನದ ಪದಕ.- ತಮಿಳುನಾಡಿನಲ್ಲಿ ನಡೆದ 8ನೇ ದಣ ಭಾರತದ ಸೀನಿಯರ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ.- ಮಧ್ಯಪ್ರದೇಶದಲ್ಲಿ ನಡೆದ ಹಿರಿಯರ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಪ್ರಶಸ್ತಿ ಪತ್ರ.- ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಚಿನ್ನದ ಪದಕ.- ಹರಿಯಾಣದಲ್ಲಿ 4ನೇ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ.- ತಮಿಳುನಾಡಿನಲ್ಲಿ ನಡೆದ 9ನೇ ದಕ್ಷಣ ಭಾರತದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ.- 3ನೇ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಚಿನ್ನದ ಪದಕ.- 7ನೇ ಸೀನಿಯರ್ ರಾಷ್ಟ್ರೀಯ ಕ್ರೀಡಾಕೂಟ ಪ್ರಥಮ ಸ್ಥಾನ.- ಹಳಿಯಾಳದಲ್ಲಿ ವಿ.ಆರ್.ದೇಶಪಾಂಡೆ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ,- ಹರಿಯಾಣದಲ್ಲಿ ನಡೆದ ವಿಶ್ವ ವಿದ್ಯಾಲಯ ಕುಸ್ತಿ ಚಾಂಪಿಯನ್ ಶಿಪ್ 5ನೇ ಸ್ಥಾನ ಮತ್ತು 23 ವರ್ಷದ ಒಳಗಿನ ಸೀನಿಯರ್ ನ್ಯಾಷನಲ್ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪತ್ರ- 2020ರಲ್ಲಿ ಧಾರವಾಡದಲ್ಲಿ ನಡೆದ ಕುಸ್ತಿ ಹಬ್ಬದಲ್ಲಿ ಚಿನ್ನದ ಪದಕ. -ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಸೇರಿದಂತೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ 30 ಕ್ಕೂ ಹೆಚ್ಚು ಚಿನ್ನದ ಪದಕಗಳು ಲಭಿಸಿವೆ.
ಕೋಟ್:
ಗ್ರಾಮೀಣ ಭಾಗದಲ್ಲಿ ಬೆಳೆದ ನಾನು ಸಾಕಷ್ಟು ಅವಮಾನಕ್ಕೆ ಒಳಗಾಗಿದ್ದೆ. ನನ್ನ ಕಟಿಂಗ್ ನೋಡಿ ನಕ್ಕು ಅವಮಾನ ಮಾಡಿದ್ದರು. ಆದರೆ, ದೃಢ ನಿರ್ಧಾರದಿಂದ ಮುನ್ನಡೆದರೆ ಎಲ್ಲವೂ ಸಾಧ್ಯ.
-ಪ್ರೇಮಾ ಹುಚ್ಚನ್ನವರ, ಕುಸ್ತಿಪಟು.