ಲಕ್ಷ ಲಿಂಗಾರ್ಚನವಿಧಿ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಅಶೋಕ್ ಪ್ರಭು, ರವೀಂದ್ರನಾಥ್ ಕಿಣಿ, ಮಾಧವ ಹೆಗ್ಡೆ ಮೊದಲಾದವರಿದ್ದರು 
ಜಿಲ್ಲೆ

ಗರಿಕೇಮಠದಲ್ಲಿ ಪೂರ್ವಭಾವಿ ಸಭೆ

ಇಂದಿರಾ ಎನ್ ಕೆ

ಕೊಕ್ಕರ್ಣೆ: ದೀಪೇಶ್ ಎಂ. ದೊಡಿಯಾ ಸಿಎ ಲೈಸಿಸ್ಟರ್ ಯು.ಕೆ. ಸೇವಾರ್ಥ ಆ.31 ಹಾಗೂ ಸೆ.1ರಂದು ಗರಿಕೇಮಠ ಶ್ರೀ ಅರ್ಕಗಣಪತಿ ಕ್ಷೇತ್ರದಲ್ಲಿ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ಅಪೂರ್ವ ಲಕ್ಷ ಲಿಂಗಾರ್ಚನವಿಧಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ಕ್ಷೇತ್ರದಲ್ಲಿ ನಡೆಯಿತು.

ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಲೋಕಲ್ಯಾಣಾರ್ಥ ಸಂಕಲ್ಪ ಕೈಗೊಳ್ಳಲಾಗಿದೆ. ಪ್ರಮುಖರಾದ ಅಶೋಕ್ ಪ್ರಭು ಸಾಹೇಬರಕಟ್ಟೆ, ರವೀಂದ್ರನಾಥ್ ಕಿಣಿ, ಮಾಧವ ಹೆಗ್ಡೆ ಮಧುವನ, ಪ್ರಕಾಶ್ ಪೂಜಾರಿ, ಸಂಕಯ್ಯ ಶೆಟ್ಟಿ, ಸಂತೋಷ್ ಕಾಂಚನ್, ರಮಾನಾಥ್ ಕಿಣಿ, ಸುರೇಂದ್ರ ಶೆಟ್ಟಿ ಬೇಳೂರು ಮತ್ತಿತರರು ಉಪಸ್ಥಿತರಿದ್ದರು.