ಕೊಕ್ಕರ್ಣೆ: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ನಿತ್ಯವೂ ಅನ್ನದಾನ ಸೇವೆ ಲಭ್ಯವಿರುವ ಉದ್ದೇಶದಿಂದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಜಿ.ಶಂಕರ್ ಹಾಗೂ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಶಾಶ್ವತ ಅನ್ನದಾನ ನಿಧಿ ಕ್ರೋಢೀಕರಣ ಹಮ್ಮಿಕೊಂಡಿದ್ದು, ಇದರ ಪೂರ್ವಭಾವಿ ಸಭೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭ ಶಾಶ್ವತ ಅನ್ನದಾನ ನಿಧಿ ಯೋಜನೆಯ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಬಳಿಕ ಯೋಜನೆಗೆಂದು ಸಂಗ್ರಹಿಸಿದ 20 ಲಕ್ಷ ರೂ. ದೇಣಿಗೆಯನ್ನು ಮಂದಾರ್ತಿಯ ನಿತ್ಯ ಅನ್ನದಾನ ನಿಧಿ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು. ಮಂದಾರ್ತಿ, ಶಿರಿಯಾರ, ಬಾರಕೂರು ವಲಯದ ಸದಸ್ಯರು, ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕದ ಸದಸ್ಯರು, ಮಹಿಳಾ ಘಟಕದವರು, ಗ್ರಾಮಸಭಾ ಗುರಿಕಾರರು, ಅಧ್ಯಕ್ಷರು ಇದ್ದರು.