ದೇವದುರ್ಗ ತಾಲೂಕು ಮುಷ್ಟೂರು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ವೈದ್ಯಾಧಿಕಾರಿ ಡಾ.ನಂದಿತಾ ಗರ್ಭಿಣಿಯ ಆರೋಗ್ಯ ತಪಾಸಣೆ ಮಾಡಿದರು. ಟಿಎಚ್‌ಒ ಡಾ.ಬನದೇಶ್ವರ, ಬಸವರಾಜ ಇದ್ದರು. 
ಜಿಲ್ಲೆ

ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

ದೇವದುರ್ಗ: ಗರ್ಭಿಣಿಯರಲ್ಲಿ ಅಪೌಷ್ಟಿಕತೆ, ಕಡಿಮೆ ತೂಕದ ಸಮಸ್ಯೆ ತಡೆಗೆ ಪೌಷ್ಟಿಕ ಆಹಾರ ಸೇವನೆಯೇ ಔಷಧ ಎಂದು ವೈದ್ಯಾಧಿಕಾರಿ ಡಾ.ನಂದಿತಾ ಹೇಳಿದರು.

ತಾಲೂಕಿನ ಮುಷ್ಟೂರು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಮಸರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಗರ್ಭಿಣಿಯರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಮುಷ್ಟೂರು ವ್ಯಾಪ್ತಿಯಲ್ಲಿ 93 ಗರ್ಭಿಣಿಯರಿದ್ದು, 16 ಗಂಡಾಂತರ ಗರ್ಭಿಣಿಯರು ಎಂದು ಗುರುತಿಸಿದ್ದು, ಆರೋಗ್ಯ ಸೌಲಭ್ಯ ಹಾಗೂ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. ಗರ್ಭಿಣಿಯರಿಗೆ ಪ್ರಾಥಮಿಕ ಹಂತದಲ್ಲಿ ಹೆಚ್ಚಿನ ಆರೋಗ್ಯ ಕಾಳಜಿ ವಹಿಸಲಾಗುವುದು. ಸ್ಕ್ಯಾನಿಂಗ್, ರಕ್ತ ತಪಾಸಣೆ, ಪ್ರತಿ ತಿಂಗಳು 9ರಂದು ತಪಾಸಣೆ ಮಾಡಲಾಗುವುದು.

ಲಸಿಕೆ, ಪೌಷ್ಟಿಕ ಆಹಾರ ಸೇವನೆ ಮಾಡುವ ಕುರಿತು ಅರಿವು, ಬಾಲಕ್ಷಯ, ಗಂಟಲು ಮಾರಿ, ಜಾಂಡೀಸ್, ನಾಯಿಕೆಮ್ಮು ಕಾಯಿಲೆಗಳಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ, ಆರೋಗ್ಯ ಇಲಾಖೆ ಅಧಿಕಾರಿ ಬಸವರಾಜ, ಶಿವಕುಮಾರ ಇತರರಿದ್ದರು.