ಬೆಳಗಾವಿ: ಗರ್ಭಿಣಿಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಆತಂಕ, ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಕಾಹೆರ್ ಆಪ್ತ ಸಮಾಲೋಚಕಿ ಹಾಗೂ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಯಾಸ್ಮಿನ್ ಹೇಳಿದರು.
ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿರ್ಸಚ್ (ಕಾಹೆರ್), ಕೌನ್ಸೆಲಿಂಗ ಸೆಲ್ ಮತ್ತು ಮನೋವಿಜ್ಞಾನ ವಿಭಾಗ ಹಾಗೂ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಧೆಯಿಂದ ಬುಧವಾರ ಗರ್ಭವತಿಯರಿಗಾಗಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗತಜ್ಞೆ ಆರತಿ ಸಂಕೇಶ್ವರಿ ಮಾನಸಿಕ ಆರೋಗ್ಯಕ್ಕಾಗಿ ಯೋಗ&ಧ್ಯಾನದ ಮಹತ್ವ ವಿವರಿಸಿದರು. ಮನ@ಶಾಸ ಅಧ್ಯಾಪಕಿ ಭೈರವಿ ಪಾರಿಶ್ವಾಡ, ಡಾ.ಗೀತಾ ಕಾಂಬಳೆ, ಜಿಲ್ಲಾ ಕುಷ್ಠರೋಗ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಂ.ವಿ. ಕಿವಡಸನ್ನವರ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್. ಪಟೇಲ್, ಡಾ.ಬಿ.ಟಿ.ಚೇತನ್ ಇತರರಿದ್ದರು.