ಕಾಸರಗೋಡು: ಮೂರು ತಿಂಗಳ ಗರ್ಭಿಣಿ ಸಾವಿಗೆ ಸಂಬಂಧಿಸಿ ಆಕೆಯ ಪತಿಯನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೈವಳಿಕೆ ಪಂಚಾಯಿತಿ ಕಯ್ಯರು ಕನ್ನಟಿಪಾರೆಯ ಶಾಂತಿಯೋಡು ನಿವಾಸಿ ಜನಾರ್ದನ(39) ಬಂಧಿತ. ಈತನ ಪತ್ನಿ, ಮಂಗಳೂರು ವಾಮಂಜೂರು ಪಿಲಿಕುಳ ನಿವಾಸಿ ವಿಜೇತ(32) ಆ.18ರಂದು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದು ಲಭಿಸಿದ ಡೆತ್‌ನೋಟ್ ಆಧಾರದಲ್ಲಿ ಪತಿಯನ್ನು ಬಂಧಿಸಲಾಗಿದೆ. ಪತಿ ತನಗೆ ನಿರಂತರ ಕಿರುಕುಳ ನೀಡುತ್ತಿರುವ ಬಗ್ಗೆ ಆಕೆ ಬರೆದುಕೊಂಡಿದ್ದರು. ಪತ್ರ ವಶಕ್ಕೆ ಪಡೆದ ಪೊಲೀಸರು ಸಮಗ್ರ ತನಿಖೆ ನಡೆಸಿ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.