ಧಾರವಾಡ: ಮುಂಗಾರು ಮಳೆಯಿಂದ ಅತಿವೃಷ್ಟಿ, ಪ್ರವಾಹ ಉಂಟಾದರೆ ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತ ಸಿದ್ಧವಿದೆ. ಸಾರ್ವಜನಿಕರಿಗೆ ತೊಂದರೆಯಾಗದ0ತೆ ಮುಂಜಾಗ್ರತೆ ವಹಿಸಲು ಪ್ರತಿ ತಾಲೂಕಿಗೆ ಹಿರಿಯ ಅಽಕಾರಿಯನ್ನು ನೋಡಲ್ ಅಽಕಾರಿಯಾಗಿ ನೇಮಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಅಧ್ಯಕ್ಷ ಹಾಗೂ ಜಿಲ್ಲಾಽಕಾರಿ ಗುರುದತ್ತ ಹೆಗಡೆ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರೈತರು ಬಿತ್ತನೆಗೆ ಭೂಮಿ ಸಿದ್ಧಗೊಳಿಸುತ್ತಿದ್ದಾರೆ. ಅತಿವೃಷ್ಟಿ ನಿರ್ವಹಿಸಲು ತಾಲೂಕು ಆಡಳಿತಗಳು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಬೇಕು. ೫ ವರ್ಷಗಳಲ್ಲಿ ಪ್ರವಾಹದಿಂದಾಗಿ ಹಾನಿ, ತೊಂದರೆಯಾಗಿರುವ ಪ್ರದೇಶಗಳನ್ನು ತಹಸೀಲ್ದಾರ್ ಮತ್ತು ತಾ.ಪಂ. ಇಒಗಳು ಗುರುತಿಸಿ ಅಲ್ಲಿ ಭೇಟಿ ನೀಡಿ ಪರಿಶೀಲಿಸಬೇಕು. ಹಾನಿ ಮರುಕಳಿಸದಂತೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿ ಸಲ್ಲಿಸಬೇಕು ಎಂದರು.
ನಗರ ಹಾಗೂ ಗ್ರಾಮ ವ್ಯಾಪ್ತಿಯ ಕೆರೆಗಳನ್ನು ಪರಿಶೀಲಿಸಿ ಸುರಕ್ಷತೆಯನ್ನು ಖಾತರಿ ಮಾಡಿಕೊಳ್ಳಬೇಕು. ಮಳೆ ನೀರು ಸಂಗ್ರಹ, ಹೆಚ್ಚುವರಿ ನೀರು ಹೊರಹಾಕಲು ಸೂಕ್ತ ಮಾರ್ಗ, ಕೆರೆ ದಂಡೆ ಭದ್ರವಾಗಿರುವ ಬಗ್ಗೆ ಗ್ರಾ.ಪಂ., ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ವಾರದಲ್ಲಿ ವರದಿ ಸಲ್ಲಿಸಬೇಕು. ಕೆರೆ ಹಾನಿಯ ಬಗ್ಗೆ ದೂರುಗಳು ಬಂದರೆ ಸಂಬAಽಸಿದ ಅಽಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಕಾರಿಗಳು ಎಚ್ಚರಿಸಿದರು.
ನಗರ ಹಾಗೂ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ, ದುರಸ್ತಿ ಕಾರ್ಯ ಮಾಡಬೇಕು. ನೀರು ಸಂಗ್ರಹವಾಗಿ ನಿಲ್ಲದಂತೆ ಮತ್ತು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಸ್ಥಳೀಯ ಜನಪ್ರತಿನಿಽಗಳ, ಗ್ರಾಮಸ್ಥರ ಸಹಕಾರ ಪಡೆದು ವಿಪತ್ತು ನಿರ್ವಹಣೆ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಎಂದರು.