ಢವಳಗಿಯ ಬಸವ ಬಾಲ ಭಾರತಿ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾಂಕ್ರಾಮಿಕ ರೋಗದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಲಿಂಗರಾಜ ಹಿರೇಗೌಡ ಮಾತನಾಡಿದರು. ಡಾ. ಜಾನ್​ ಕಟವಟೆ, ಡಾ. ಜಾನ್​ ಕಟವಟೆ, ರಮೇಶ ಮೂಲಿಮನಿ, ಜೆ.ಎಸ್​. ಪಾಟೀಲ, ಬಿ.ಎಸ್​. ಪಾಟೀಲ ಇತರರಿದ್ದರು. 
ಜಿಲ್ಲೆ

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ

Vijayapura - Desk - Shamarao Kulkarni

ಢವಳಗಿ : ಡೆಂ, ಮಲೇರಿಯಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ ಎಂದು ಡಾ. ಲಿಂಗರಾಜ ಹಿರೇಗೌಡ ಹೇಳಿದರು.

ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ಡೆಂ, ಮಲೇರಿಯಾ ರೋಗದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಳೆಗಾಲ ಆರಂಭವಾಗಿದ್ದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಸೊಳ್ಳೆ ಕಡಿತದಿಂದ ಡೆಂ, ಮಲೇರಿಯಾ, ಚಿಕನ್​ ಗುನ್ಯಾ, ಆನೆಕಾಲು ರೋಗ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮನೆಯ ಸುತ್ತಮುತ್ತ ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಸ್ಪತ್ರೆಯ ಮಲೇರಿಯಾ ಅಧಿಕಾರಿ ಡಾ. ಜಾನ್​ ಕಟವಟೆ, ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳಾದ ಚೇತನ ಕಲ್ಲುಂಡಿ, ಡಾ. ರುದ್ರವಾಡಿ, ಮುಖ್ಯ ಗುರು ರಮೇಶ ಮೂಲಿಮನಿ, ಜೆ.ಎಸ್​. ಪಾಟೀಲ, ಬಿ.ಎಸ್​. ಪಾಟೀಲ, ಎಸ್​.ಬಿ. ಬಿರಾದಾರ, ಹರಿನಾಥ, ಎಸ್​.ಎಸ್​. ಅವಟಿ ಉಪಸ್ಥಿತರಿದ್ದರು.