ಸೋಮೇಶ್ವರ ಗುಡ್ಡ ಕುಸಿತ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭೇಟಿ ನೀಡಿದರು. ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಮುಖಂಡರಾದ ಕಿಶನ್ ಹೆಗ್ಡೆ, ಪ್ರದೀಪ್ ಕೆ.ಶೆಟ್ಟಿ ಗುಡಿಬೆಟ್ಟು ಪ್ರಮುಖರು ಇದ್ದರು 
ಜಿಲ್ಲೆ

ಗುಡ್ಡ ಕುಸಿತ ಪ್ರದೇಶದಲ್ಲಿ ಮುಂಜಾಗ್ರತೆ : ಸೋಮೇಶ್ವರಕ್ಕೆ ಭೇಟಿ ನೀಡಿ ಎಂಎಲ್ಸಿ ಭಂಡಾರಿ ಸೂಚನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಇಲ್ಲಿನ ಸಮೀಪದ ಸೋಮೇಶ್ವರ ಗುಡ್ಡ ಕುಸಿತ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಬುಧವಾರ ಭೇಟಿ ನೀಡಿ ಸೋಮೇಶ್ವರ ಅಭಿವೃದ್ಧಿ ಕಾಮಗಾರಿ ಮತ್ತು ಗುಡ್ಡ ಕುಸಿತ ಸ್ಥಳ ವೀಕ್ಷಿಸಿದರು. ಸೋಮೇಶ್ವರ ಗುಡ್ಡ ಕುಸಿತ ಬಗ್ಗೆ ಮುಂಜಾಗ್ರತೆ ಕ್ರಮಕೈಗೊಳ್ಳುವಂತೆ ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್‌ಗೆ ಸೂಚಿಸಿದರು.

ಬಳಿಕ ಸೋಮೇಶ್ವರ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಜಿಲ್ಲಾ ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಉಡುಪಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆ.ಶೆಟ್ಟಿ ಗುಡಿಬೆಟ್ಟು, ವಕ್ತಾರ ವಿಕಾಸ್ ಹೆಗ್ಡೆ ಮೊಳಹಳ್ಳಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬೈಂದೂರು ಭೂ ನ್ಯಾಯ ಮಂಡಳಿ ಸದಸ್ಯ ಮಾಣಿಕ್ಯ ಹೋಬಳಿದಾರ್, ಪಡುವರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಹೋಬಳಿದಾರ್, ಬೈಂದೂರು ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ, ತಾಲೂಕು ಕೆಡಿಪಿ ಸದಸ್ಯ ಜಗದೀಶ ದೇವಾಡಿಗ, ಮುಖಂಡರಾದ ಟಿ.ಶಂಕರ ಪೂಜಾರಿ, ರಘುರಾಮ್ ಶೆಟ್ಟಿ, ರಾಜೇಶ್ ಕೆ. ಪಡುವರಿ, ಪ್ರಸನ್ನ ಶೆಟ್ಟಿ ಶಿರೂರು, ಮಹಾಲಿಂಗ ನಾಯ್ಕ್, ಮೊದಲಾದವರು ಇದ್ದರು.