ಜಿಲ್ಲೆ

ಶಿಕ್ಷಕರ ಪೂರ್ವಭಾವಿ ತರಬೇತಿ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಹು-ಧಾ ನಾಗರಿಕ ಪರಿಸರ ಸಮಿತಿ, ಮುನವಳ್ಳಿ ಪ್ರತಿಷ್ಠಾನ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜ. 6ರಂದು ಬೆಳಗ್ಗೆ 10.30ಕ್ಕೆ ನಗರದ ಜೆಎಸ್​ಎಸ್​ ಕಾಲೇಜು ಆವರಣದಲ್ಲಿನ ಉತ್ಸವ ಸಭಾಭವನದಲ್ಲಿ ಪರಿಸರ ಮಿತ್ರ ಶಾಲಾ ಸ್ಪರ್ಧೆ-2025 ಧಾರವಾಡ ತಾಲೂಕು ಹಾಗೂ ಧಾರವಾಡ ಶಹರ ಶಿಕ್ಷಕರಿಗೆ ಪೂರ್ವಭಾವಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಉಪಸಮನ್ವಯ ಅಧಿಕಾರಿ ಎಸ್​. ಎಂ. ಹುಡೇದಮನಿ, ಪರಿಸರ ಅಧಿಕಾರಿ ಐ.ಎಚ್​. ಜಗದೀಶ ಆಗಮಿಸುವರು. ಉಪನ್ಯಾಸಕರಾಗಿ ಕೆ. ಎಚ್​. ನಾಯಕ ಆಗಮಿಸುವರು. ರಾಮಕೃಷ್ಣ ಸದಲಗಿ, ಅಶೋಕ ಸಿಂದಗಿ ಉಪಸ್ಥಿತರಿರುವರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.