ಜಿಲ್ಲೆ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ: ಕೆರಗೋಡು ದೈತಮ್ಮನಿಗೆ ಪ್ರಾರ್ಥನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದ ದೈತಮ್ಮ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಭಾರತೀಯ ಸೈನಿಕರಿಗೆ ಹೆಚ್ಚಿನ ಬಲ ಬರಲೆಂದು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಭೀಮೇಶ್ ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಹಿಂದುಗಳ ಹತ್ಯೆ ಖಂಡಿಸಿ ಹಾಗೂ ನೊಂದ ಕುಟುಂಬದ ಸಿಂಧೂರವನ್ನು ಅಳಿಸಿದ ಪ್ರತಿರೋಧವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಸೇನೆಗೆ ಪ್ರತಿ ದಾಳಿ ನಡೆಸುತ್ತಿದೆ. ಶತ್ರು ದೇಶದ ಡ್ರೋಣ್ ಹಾಗೂ ಕ್ಷಿಪಣಿಯನ್ನು ಆಕಾಶದಲ್ಲಿಯೇ ಹೊಡೆದುರುಳಿಸಿದೆ. ಈ ದೈತಮ್ಮ ದೇವಿ ಕೃಪೆ ಭಾರತದ ಸೈನಿಕರ ಮೇಲೆ ಇರಲಿ ಎಂದು ಸಿಂಧೂರ ಪೂಜೆ ನಡೆಸಿದ್ದೇವೆ ಎಂದರು.

ಮುಖಂಡರಾದ ಶಿವಕುಮಾರ್ ಆರಾಧ್ಯ, ಕೀಲಾರ ಮಧು, ಯೋಗಾನಂದ, ವಿನೋಬಾ, ನಾಗರಾಜು, ಎಂ.ಸಿ.ವರದರಾಜ್, ಶಿವಣ್ಣ, ನಾಗೇಶ್, ಸಾಗರ್ ಇತರರಿದ್ದರು.