ಗಜೇಂದ್ರಗಡ: ರಾಜ್ಯದಲ್ಲಿ ಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸಿ ಮುಸ್ಲಿಮರು ಪಟ್ಟಣದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಬಳಿಕ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.
ಬಕ್ರೀದ್ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಇಲ್ಲಿನ ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಮಾರ್ಗವಾಗಿ ಈದ್ಗಾ ಮೈದಾನ ತಲುಪಿತು.
ಖುಷ್ತಾರ ನೂರಾನಿ ಮೌಲಾನಾ, ಯಾಸೀನ್ ಮೌಲಾನಾ, ಖಲೀಲ್ ಅಹ್ಮದ ಖಾಜಿ, ರಫೀಕ್ ಮೌಲಾನಾ, ಟಕ್ಕೇದ ದರ್ಗಾದ ನಿಜಾಮುದ್ದೀನ್ ಷಾ ಮಕಾನದಾರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನ ತಟಗಾರ, ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ, ಎ.ಡಿ. ಕೋಲಕಾರ, ಸುಭಾನಸಾಬ ಆರಗಿದ್ದಿ, ಎಂ.ಎಚ್. ಕೋಲಕಾರ, ಎ.ಜಿ. ತಾಳಿಕೋಟಿ, ಬಾಬಣ್ಣಿ ನಧಾಫ್, ನಾಸೀರ ಅಲಿ ಸುರಪುರ, ಮಾಸುಮಲಿ ಮದಗಾರ, ಫಯಾಜ ತೋಟದ, ಎಂ.ವೈ. ಮುಧೋಳ, ಇಮ್ರಾನ್ ಅತ್ತಾರ, ಭಾಷಾ ಮುದಗಲ್, ದಾದು ಹಣಗಿ, ಸಮದ ಕೋಲಕಾರ, ಮಹ್ಮದ ನಾಲಬಂದ ಇತರರು ಇದ್ದರು.