ಹುಬ್ಬಳ್ಳಿ: ಇಲ್ಲಿಯ ನವನಗರದ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಯಾಸ್ ಕಾರ್ಯಕ್ರಮದಲ್ಲಿ ನವೆಂಬರ್ ನಲ್ಲಿ ನಿವೃತ್ತಿ ಹೊಂದಿದ 24 ನೌಕರರಿಗೆ ಪಿಂಚಣಿ ಪಾವತಿ ಆದೇಶ (ಪಿಪಿಒ) ಪತ್ರಗಳನ್ನು ವಿತರಣೆ ಮಾಡಲಾಯಿತು.
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಪಿಪಿಒ ವಿತರಣೆ ಮಾಡಿದರು. ಸಹಾಯಕ ಪಿಎಫ್ ಆಯುಕ್ತರಾದ ಬಿಜಯ ಪ್ರಸಾದ, ಮಂಜುನಾಥ ಜೆ.ಎ., ಅಕೌಂಟ್ಸ್ ಆಫೀಸರ್ ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರವೈಸರ್ ಕೆ. ಯುವರಾಜ ಇತರರು ಇದ್ದರು.