ಹರಪನಹಳ್ಳಿ ಹಡಗಲಿ ರಸ್ತೆಯ ದರ್ಗಾದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಂಜುಮನ್ ಸಮಿತಿ ಅಧ್ಯಕ್ಷ ನೂರ್ ಆಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ, ಪುರಸಭೆ ಸದಸ್ಯ ಜಾಕೀರ್ ಸರ್ಕಾವಸ್, ಜಾಯೀದ್, ಎಲ್ ಮಂಜಾನಾಯ್ಕ, ಶಿಕ್ಷಕ ಸಲಾಂ ಸಹೇಬ್, ಬಡಗಿ ರೆಹಮ್ ಉಲ್ಲಾ ಇತರರಿದ್ದರು. 
ಜಿಲ್ಲೆ

ಜೀವರಾಶಿಗಳಿಗೆ ಒಳಿತಾಗುವಂತೆ ಮೊರೆ

ಹರಪನಹಳ್ಳಿ: ತ್ಯಾಗ ಮತ್ತು ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಶನಿವಾರ ತಾಲೂಕಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಹಡಗಲಿ ರಸ್ತೆ ಹಾಗೂ ಹೊಸಪೇಟೆ ರಸ್ತೆಯ ದರ್ಗಾಗಳಲ್ಲಿ ಮಹಿಳೆಯರು ಸೇರಿದಂತೆ ಶನಿವಾರ ಬೆಳಗ್ಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಕಲ ಜೀವರಾಶಿಗಳಿಗೆ ಒಳಿತಾಗುವಂತೆ ದೇವರಿಗೆ ಮೊರೆಯಿಟ್ಟರು.

ಹಬ್ಬದ ಅಂಗವಾಗಿ ಶ್ವೇತವಸ್ತ್ರ ಧರಿಸಿದ ಮುಸ್ಲಿಮರು ಮಸೀದಿಗಳಿಗೆ ಆಗಮಿಸಿ, ನೂರಾರು ಜನ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣ ಸೇರಿದಂತೆ ಅರಸೀಕೆರೆ, ಕುಂಚೂರು, ಶೃಂಗಾರತೋಟ, ಉಚ್ಚಂಗಿದುರ್ಗ, ಹಾರಕನಾಳು, ಹುಲಿಕಟ್ಟಿ, ರಾಮನಗರ, ಹನುಮನಹಳ್ಳಿ, ತೆಲಿಗಿ, ಶಿಂಗ್ರಹಳ್ಳಿ, ನಂದಿಬೇವೂರು, ಕಾನಹಳ್ಳಿ, ಕಡಕೋಳ, ಕುಣೇಮಾದಿಹಳ್ಳಿ, ಹೊಸಕೋಟಿ, ಮಾದಿಹಳ್ಳಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು.