ಜಿಲ್ಲೆ

ಪ್ರವೀಣ್ ನೆಟ್ಟಾರು ಸ್ಮತಿ ದಿನ, ಪ್ರತಿಮೆಗೆ ಮಾಲಾರ್ಪಣೆ

ನೆಟ್ಟಾರು: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಸ್ಮತಿ ದಿನ ಇತ್ತೀಚೆಗೆ ಅವರ ಮನೆಯಲ್ಲಿ ನಡೆಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ಬಿಜೆಪಿ ಮಂಡಲ ಉಪಾಧ್ಯಕ್ಷ ಆರ್.ಕೆ ಭಟ್.ಕುರುಂಬುಡೇಲು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕಿ ಭಾಗೀರಥಿ ಮುರುಳ್ಯ ಅವರು ದಿ.ಪ್ರವೀಣ್ ಪ್ರತಿಮೆಗೆ ಪುಷ್ಪ ಅರ್ಪಿಸಿದರು. ಕಾರ್ಗಿಲ್ ವಿಜಯ್ ದಿವಸದ ನೆನಪಿಗಾಗಿ ನಿವೃತ್ತ ಸೈನಿಕ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಅವರನ್ನು ಗೌರವಿಸಲಾಯಿತು.

ದಿ.ಪ್ರವೀಣ್ ನೆಟ್ಟಾರು ಸ್ಮರಣಾರ್ಥ ಸುಳ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೆವಿಜಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ, ಪ್ರವೀಣ್ ನೆಟ್ಟಾರು ಪತ್ನಿ ನೂತನ ಪ್ರವೀಣ್ ಸೇರಿದಂತೆ ಹಲವರು ರಕ್ತದಾನ ವಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ವಿಕಸಿತ ಭಾರತ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ ನಮಿತಾ ಎಲ್.ರೈ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅಜಿತ್ ರಾವ್, ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಕುವಾರ್ ಕಂದಡ್ಕ, ಬೆಳ್ಳಾರೆ ಶಕ್ತಿ ಕೇಂದ್ರ ಪ್ರಮುಖ್ ದಿಲೀಪ್ ಗಟ್ಟಿಗಾರು, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರೀಕಾಂತ್ ವಾವಿನ ಕಟ್ಟೆ, ಪ್ರವೀಣ್ ನೆಟ್ಟಾರು ಮನೆಯವರು ಉಪಸ್ಥಿತರಿದ್ದರು.

ಒಂದು ಗಿಡ ತಾಯಿ ಹೆಸರಿನಲ್ಲಿ ಕಾರ್ಯಕ್ರಮ

ಒಂದು ಗಿಡ ತಾಯಿ ಹೆಸರಿನಲ್ಲಿ ಕಾರ್ಯಕ್ರಮವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಗಿಡ ನೆಡುವ ಮೂಲಕ ಆಚರಿಸಿದರು. ಬೆಳ್ಳಾರೆ ಬಿಜೆಪಿ ಶಕ್ತಿ ಕೇಂದ್ರದ ಎದುರು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಗಿಡ ನೆಟ್ಟು ‘ಏಕ್ ಪೇಡ್ ವಾ ಕೇ ನಾಮ್‌‘ ಕಾರ್ಯಕ್ರಮ ನೆರವೇರಿಸಿದರು. ಬೆಳ್ಳಾರೆ ಗ್ರಾಮದ ಆಯ್ದ ಅಶಕ್ತರಿಗೆ ಸಹಾಯ ನೀಡಲಾಯಿತು.