ಗೋಕಾಕ: ನಗರದ ಸೋಮವಾರ ಪೇಟೆಯಲ್ಲಿ ಚಲಿಸುತ್ತಿದ್ದ ಪ್ರವೀಣ ಜಮಖಂಡಿ ಕಾರಿನ ಮೇಲೆ ಶುಕ್ರವಾರ ಹಳೆಯ ಕಟ್ಟಡದ ಬೃಹತ್ ಗೋಡೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಸಣ್ಣಪುಟ್ಟಗಾಯಗಳೊಂದಿಗೆ ಕಾರು ಚಾಲಕ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಗೋಕಾಕ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.