ಜಿಲ್ಲೆ

ಹಾಸನ ದುರಂತ ನಗರದ ಪ್ರವೀಣ್ ಮೃತ

ಬಳ್ಳಾರಿ : ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದುರಂತದಲ್ಲಿ ಇಲ್ಲಿನ ನಾಗಲಕೆರೆಯ ನಿವಾಸಿ, ಇಂಜನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ಮೃತಪಟ್ಟಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತನ ತಾಯಿ ಸುಶೀಲಾ ಅಡುಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡತನದ ನಡುವೆಯೇ ಅವರು ಮಗನಿಗೆ ಉನ್ನತ ಶಿಕ್ಷಣ ಕೊಡಿಸಲು ಶ್ರಮಿಸಿದ್ದರು. ಮೃತದೇಹವು ನಾಗಲಕೆರೆಯ ನಿವಾಸಕ್ಕೆ ತಲುಪುತ್ತಿದ್ದಂತೆ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಅಕ್ರಂದನ ಮುಗಿಲು ಮುಟ್ಟಿತು. ಕುಟುಂಬಸ್ಥರ ಗೋಳಾಟ ಕಂಡು ಸ್ಥಳೀಯರು ಮರುಗಿದರು.