ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಜು.15ರಂದು ಸಂಜೆ 7 ಗಂಟೆಗೆ ವಿಶ್ವಧರ್ಮ ಪ್ರವಚನ ಮಂಗಲೋತ್ಸವ ಜರುಗಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಯಡಿಯೂರು ಶ್ರೀಸಿದ್ಧಲಿಂಗ ಶಿವಯೋಗಿ, ಶ್ರೀ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಗ್ರಂಥಗಳ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 7 ಗಂಟೆಗೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಶ್ರೀ ಗೋಣಿರುದ್ರ ದೇವರು ಸಮ್ಮುಖ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಪಾಲ್ಗೊಳ್ಳುವರು. ಸಂಗಮೇಶ ಪಾಟೀಲ, ಬಸವರಾಜ ಹೊನ್ನಿಗನೂರು ಸಂಗೀತ ಸೇವೆ ನಡೆಸುವರು ಎಂದು ಪ್ರವಚನ ಸಮಿತಿ ಅಧ್ಯಕ್ಷ ಪವನ ಚೋಪ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.