ಜಿಲ್ಲೆ

ಕಾಸರಬೋಸಗಾದಲ್ಲಿ ಪ್ರವಚನ ೧೪ರಿಂದ

ಯಡ್ರಾಮಿ: ಕಾಸರಬೋಸಗಾ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಕೆಂಚಬಸವ ಶಿವಾಚಾರ್ಯರ ೧೧ನೇ ಪುಣ್ಯಸ್ಮರಣೆ ನಿಮಿತ್ತ ಜ.೧೪ರಿಂದ ಪ್ರವಚನ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠ ತಿಳಿಸಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಕೆಂಚವೃಷಬೇAದ್ರ ಶಿವಾಚಾರ್ಯರ ನೇತೃತ್ವದಲ್ಲಿ ಜ.೧೪ ರಿಂದ ಒಂಬತ್ತು ದಿನ ನಿತ್ಯ ಸಂಜೆ ೭ಕ್ಕೆ ಶ್ರೀ ಕೆಂಚಬಸವೇಶ್ವರರ ಲೀಲಾಮೃತ ಪ್ರವಚನ ನಡೆಯಲಿದೆ. ಯಕ್ತಾಪುರದ ಚಂದ್ರಶೇಖರಯ್ಯ ಶಾಸ್ತಿç, ಕುಮ್ಮನಸಿರಸಗಿಯ ಶ್ರೀ ಬಸವರಾಜ ಶರಣರು ಪ್ರವಚನ ನಡೆಸಿಕೊಡಲಿz್ದÁರೆ. ವಿರೇಶ ಬಡಿಗೇರ ಸಂಗೀತ, ಪ್ರವೀಣ ವಿಶ್ವಕರ್ಮ ತಬಲಾ ಸಾಥ್ ನೀಡುವರು. ಜ.೨೨ರಂದು ಬೆಳಗ್ಗೆ ೧೦ಕ್ಕೆ ಆಲೂರು ಸಂಸ್ಥಾನ ಹಿರೇಮಠದಿಂದ ಜವಳಗಾ, ಮುತ್ತಕೋಡ ಮಾರ್ಗವಾಗಿ ಕಾಸರಬೋಸಗಾವರೆಗೆ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದೆ.