ಜಿಲ್ಲೆ

ರುದ್ರಾಕ್ಷಿಮಠದಲ್ಲಿ ಪ್ರವಚನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮಂಗಳವಾರ ಪೇಟೆಯ ಶ್ರೀ ರುದ್ರಾಕ್ಷಿಮಠದಲ್ಲಿ ಶ್ರೀ ನಿಜಗುಣ ಶಿವಯೋಗಿಗಳ 76ನೇ ವಾರ್ಷಿಕ ಜಯಂತಿ ಉತ್ಸವ ನ. 18ರಿಂದ ನ. 24ರ ವರೆಗೆ ಏರ್ಪಡಿಸಲಾಗಿದೆ. ನಿತ್ಯ ಸಂಜೆ 6ಕ್ಕೆ ಪ್ರವಚನ ನಡೆಯಲಿದೆ.

ಉತ್ಸವದ ಅಂಗವಾಗಿ ಶ್ರೀ ಬಸವಲಿಂಗೇಶ್ವರ ದೀಪೋತ್ಸವ ಹಾಗೂ ಶ್ರೀ ನಿಜಗುಣರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಶ್ರೀಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.