ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾಜೂರಿನ ಗ್ರಾಮ ದೇವತೆ ಹೊನ್ನಲ್ದಮ್ಮ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಹಾಗೂ ನಾಡಿನ ಸಮೃದ್ಧಿಗಾಗಿ ಪ್ರತ್ಯಂಗೀರಾ ಹೋಮ ಜರುಗಿತು.
ಕ್ಷೇತ್ರದ ವರಗುರು ವೀರಭದ್ರೇಶ್ವರ ಸ್ವಾಮಿ ಅಪ್ಪಣೆಯಂತೆ ವೇದ ಬ್ರಹ್ಮ ಎಂ.ಎಸ್.ಸಿದ್ದೇಶ್ ಶಾಸ್ತ್ರಿ ನೇತೃತ್ವದ ಆಗಮಿಕ ತಂಡದೊಂದಿಗೆ ಪೂಜಾ ಕೈಂಕರ್ಯ ಜರುಗಿತು.
ಗಂಗೆ ಪೂಜೆ, ಮಹಾಗಣಪತಿ ಆರಾಧನೆಯೊಂದಿಗೆ ಗೋಪೂಜೆ, ಯಾಗ ಮಂಟಪದಲ್ಲಿ ಗಣಪತಿ, ಸುಬ್ರಹ್ಮಣ್ಯ, ನವಗ್ರಹ, ಮೃತ್ಯುಂಜಯ, ದುರ್ಗಾ ಶರಭೇಶ್ವರ ಸಹಿತ ಮಹಾ ಪ್ರತ್ಯಂಗೀರಾ ದೇವಿ ಕಳಸ ಸ್ಥಾಪಿಸಿ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.