ಜಿಲ್ಲೆ

ಕೊಂಡೆವೂರು ಶ್ರೀ ಸಂನ್ಯಾಸ ಸ್ವೀಕಾರದ ಪ್ರತಿಷ್ಠಾಪನಾ ವರ್ಧಂತಿ

ಸೌಮ್ಯ ಆರ್

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಭಾನುವಾರ ಪೀಠ ಪ್ರತಿಷ್ಠಾಪನಾ ದಿನ ಮತ್ತು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಸಂನ್ಯಾಸಾಶ್ರಮ ಸ್ವೀಕಾರದ 22ನೇ ವಾರ್ಷಿಕ ದಿನ ಕಾರ್ಯಕ್ರಮ ಶ್ರೀವಿಷ್ಣು ಸಹಸ್ರನಾಮ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಶ್ರೀಪಾದ ಯೆಸ್ಸೋ ನಾಕ್, ರಾಜ್ಯಸಭಾ ಸದಸ್ಯ ಕೆ. ನಾರಾಯಣ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಭೂದಾನಿ ಕಿರಣ್ ಕುಮಾರ್ ಭಂಡಾರಿ, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಸ್ಕತ್‌ನ ವಿಶ್ವನಾಥನ್ ವೆಂಗರೆ, ಮಂಗಳೂರಿನ ಉದ್ಯಮಿ ಎ.ಜೆ.ಶೇಖರ್ ಶುಭ ಹಾರೈಸಿದರು.

ಆಶ್ರಮದ ಆಶ್ರಯ ಯೋಜನೆಯಡಿಯಲ್ಲಿ ಸ್ವಂತ ಭೂಮಿ ಇಲ್ಲದ ಹತ್ತು ಬಡ ಕುಟುಂಬಗಳಿಗೆ ಭೂದಾನ ನೀಡಲಾಯಿತು. ಮಂಗಳೂರು ಕರಂಗಲ್ಪಾಡಿಯ ಕಿರಣ್ ಭಂಡಾರಿ ಕೊಡುಗೆಯಾಗಿ ನೀಡಿದ 1 ಎಕರೆ 19 ಸೆಂಟ್ಸ್ ಭೂಮಿಯ ಹಕ್ಕುಪತ್ರವನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು. ಕಿರಣ್ ಭಂಡಾರಿ ದಂಪತಿಗಳನ್ನು ಸನ್ಮಾನಿಸಲಾಯಿತು. ದರ್ಭೆತಡ್ಕದ ಶಂಕರ ವೇದವಿದ್ಯಾ ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಮೋನಪ್ಪ ಭಂಡಾರಿ ವಂದಿಸಿದರು. ದಿನಕರ ಹೊಸಂಗಡಿ, ಅಶೋಕ್ ಬಾಡೂರು ಕಾರ್ಯಕ್ರಮ ನಿರೂಪಿಸಿದರು.