ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಜಯ ಮತ್ತು ಪ್ರಿಯಾ ಹೊರಡಿ ಹಾಗೂ ಪ್ರೊ. ಆರ್.ವಿ. ಹೊರಡಿ ದತ್ತಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆ. 20ರಂದು ಸಂಜೆ 6 ಗಂಟೆಗೆ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಿದೆ.
ಕರ್ನಾಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಹಾದೇವಪ್ಪ ದಳಪತಿ ಅತಿಥಿಗಳಾಗಿ ಆಗಮಿಸುವರು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಸಮರ್ಥ ಕೆರಿಮನಿ, ದೀಪಾ ಕತ್ತಿ, ಕರ್ನಾಟಕ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ದೀಪಾ ದೇವಗಿರಿ, ಸಿದ್ದಣ್ಣ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರಭಾವತಿ ಹೊರಡಿ ಉಪಸ್ಥಿತರಿರುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.