ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಸತತ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಬಿ.ಎಸ್. ನೇಮಗೌಡರ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಜಿಮಖಾನಾ ವಿಭಾಗವು ಸೃಜನಾ ರಂಗಮ೦ದಿರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೋಕಿ, ಆಡಂಬರದಿ೦ದ ಉನ್ನತ ಹುದ್ದೆಗೇರಲು ಸಾಧ್ಯವಿಲ್ಲ. ಬದಲಾಗಿ ಶ್ರದ್ಧೆ, ಸಮಯ ಪಾಲನೆ, ಕ್ರಿಯಾಶಿಲತೆ ಮತ್ತು ಕೌಶಲಗಳಿಂದ ಸಾಧನೆ ಸಾಧ್ಯ. ಐಪಿಎಸ್ ಅಽಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಕರ್ನಾಟಕ ಮಹಾವಿದ್ಯಾಲಯದ ಶೈಕ್ಷಣಿಕ ಪರಿಸರ ಬಹಳ ಅನುಕೂಲವಾಯಿತು ಎಂದು ತಮ್ಮ ಪಿಯುಸಿ ಮತ್ತು ಪದವಿ ಶಿಕ್ಷಣದ ದಿನಗಳನ್ನು ಸ್ಮರಿಸಿದರು.
ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಎಲ್ಲರೂ ಪ್ರತಿಭಾವಂತರೇ. ಅಂಥವರನ್ನು ಗುರುತಿಸುವ ಶೈಕ್ಷಣಿಕ ಪರಿಸರ ಕರ್ನಾಟಕ ಕಾಲೇಜಿನ ಇದೆ ಎಂದರು.
ಜಿಮಖಾನಾ ವಿಭಾಗದ ಕಾರ್ಯಾಧ್ಯಕ್ಷ ಡಾ. ಎಂ.ಆರ್. ಹಿರೇಮಠ ಮಾತನಾಡಿ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಶಿಕ್ಷಣದ ಹಸಿವು ನೀಗಿಸಲು ಅರಟಾಳ ರುದ್ರಗೌಡರು, ರೊದ್ದ ಶ್ರೀನಿವಾಸರಾಯರು ಮತ್ತು ಸರ್. ಸಿದ್ದಪ್ಪ ಕಂಬಳಿಯವರ ಪರಿಶ್ರಮ, ತ್ಯಾಗ. ಅಜರಾಮರ ಎಂದರು.
ಜಿಮಖಾನಾ ಉಪಾಧ್ಯಕ್ಷೆ ಡಾ. ಸುಕನ್ಯಾ ಜಾಲಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಮುಕುಂದ ಲಮಾಣಿ, ಸೃಷ್ಟಿ ದೇಶಪಾಂಡೆ, ಲಾವಣ್ಯ ತೋಟಗೇರ, ಇತರರಿದ್ದರು.