ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಾರ್ಕೂರು ದೇವಸ್ಥಾನ ಆಡಳಿತ ಮಂಡಳಿ ವಿಶ್ವಸ್ಥರಾದ ಮೋಹನ್ ದಾಸ್ ಹಿರಿಯಡ್ಕ ಮಾತನಾಡಿದರು. ಕಾರ್ಯಾಧ್ಯಕ್ಷ ಜನಾರ್ದನ ಪಡುಪಣಂಬೂರು, ಜನಾರ್ದನ ದೇವಾಡಿಗ ಬಾರಕೂರು, ನಾರಾಯಣ ದೇವಾಡಿಗ ಕುಂದಾಪುರ ಮತ್ತಿತರರು ಇದ್ದರು.  
ಜಿಲ್ಲೆ

ಪದವಿ ಶಿಕ್ಷಣದಿಂದ ಪ್ರಗತಿ ಸಾಧ್ಯ

ಇಂದಿರಾ ಎನ್ ಕೆ

ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಧರ್ಮ ಸಂಸ್ಕೃತಿ ದೇವರ ನಂಟು ಹೆಚ್ಚಿಸಲು ದೇವಸ್ಥಾನದಿಂದ ನೀಡುವ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳೇ ಬರುವುದು ಉತ್ತಮ ಎಂದು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ವಿಶ್ವಸ್ಥ ಮೋಹನ್ ದಾಸ್ ಹಿರಿಯಡ್ಕ ಹೇಳಿದರು.
ಗುರುವಾರ ಮುಂಬೈ ದೇವಾಡಿಗರ ಸಂಘ ಮತ್ತು ನಾನಾ ದಾನಿಗಳ ನೆರವಿನಿಂದ ದೇವಾಡಿಗ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜನಾರ್ದನ ಪಡುಪಣಂಬೂರು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ವಿಶ್ವಸ್ಥರು ಮತ್ತು ಇನ್ನಿತರ ಪಧಾಧಿಕಾರಿಗಳಾದ ಜನಾರ್ದನ ದೇವಾಡಿಗ ಬಾರಕೂರು, ನಾರಾಯಣ ದೇವಾಡಿಗ ಕುಂದಾಪುರ, ಚೆನ್ನಪ್ಪ ಮೊಯ್ಲಿ, ರಾಜೇಶ್ ದೇವಾಡಿಗ ತ್ರಾಸಿ ಉಪಸ್ಥಿತರಿದ್ದರು. ಗಣೇಶ್ ದೇವಾಡಿಗ ಸ್ವಾಗತಿಸಿದರು. ಜನಾರ್ದನ ದೇವಾಡಿಗ ಪಡುಪಣಂಬೂರು ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.