ಜಿಲ್ಲೆ

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ತಾಲೂಕು ಘಟಕ ವತಿಯಿಂದ ತಾಲೂಕು ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ, ಲಿಂಗಧಾರಣೆ ಮತ್ತು ಸಹಜ ಶಿವಯೋಗ ಕಾರ್ಯಕ್ರಮವನ್ನು ಅ. 6ರಂದು ಬೆಳಗ್ಗೆ 10.30ಕ್ಕೆ ನಗರದ ಲಿಂಗಾಯತ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣಕುಮಾರ ಶೀಲವಂತ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಜಗದೀಶ ಶೆಟ್ಟರ್​ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್​ ಸದಸ್ಯ ಎಸ್​.ವಿ.ಸಂಕನೂರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಮಲ್ಲಿಕಾರ್ಜುನ ಸಾವಕಾರ, ಅಣ್ಣಪ್ಪ ಬಾಗಿ, ಲಿಂಗರಾಜ ಅಂಗಡಿ, ಶೇಖರ ಕವಳಿ, ವೀರಣ್ಣ ಮಳಗಿ, ಇತರರು ಪಾಲ್ಗೊಳ್ಳುವರು ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಿಎಂಡಿಆರ್​ ನಿರ್ದೇಶಕ ಬಸವಪ್ರಭು ಜಿರ್ಲಿ, ಪ್ರೊ. ಚನ್ನಪ್ಪ ಅಕ್ಕಿ, ಅನಿತಾ ಮುನವಳ್ಳಿ, ಶೈಲಜಾ ಕೌಜಗೇರಿ, ಅರವಿಂದ ಜಮಖಂಡಿ ಸೇರಿ ಇತರರಿಗೆ ಸನ್ಮಾನಿಸಲಾಗುವುದು. ನಂತರ ಸಿ.ಎಂ.ಕೆಂಗಾರ ಮತ್ತು ಜಿ.ಟಿ.ದೊಡಮನಿ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ ಎಂದರು.
ರವೀಂದ್ರ ಕಪಲಿ, ಶೇಖರ ಕವಳಿ, ಶಿವಕುಮಾರ ಕುಂಬಾರಿ ಇತರರು ಇದ್ದರು.