ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಕ್ಕಳ ಪ್ರತಿಭೆ ಗುರುತಿಸಿ ಬೆಳೆಸಲು ಪ್ರೋತ್ಸಾಹಿಸಲು ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿ ಆಯೋಜಿಸುವ ಮೂಲಕ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಎಂದು ಶಾಲೆ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ತೋರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೪೬ ಸ್ಪರ್ಧೆಗಳಲ್ಲಿ ೨೧ ಪ್ರಥಮ, ೮ ದ್ವಿತೀಯ ಹಾಗೂ ನಾಲ್ವರು ತೃತೀಯ ಸ್ಥಾನ ಪಡೆದು ಒಟ್ಟು ೩೩ ಬಹುಮಾನ ಶಾಲೆ ಮಕ್ಕಳು ತಮ್ಮದಾಗಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
೧-೪ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ: ಸಿದ್ದರಾಮ ರಾಯಗೊಂಡ (ಕನ್ನಡ ಕಂಠಪಾಠ), ವೈಷ್ಣವಿ ಗುರುರಾಜ (ಇಂಗ್ಲಿಷ ಕಂಠಪಾಠ), ಸಾನ್ವಿ ಸುರೇಶ (ದೇಶಭಕ್ತಿಗೀತೆ), ರಕ್ಷಿತಾ ಅನಂತರಾವ (ಚಿತ್ರಕಲೆ), ವೈಷ್ಣವಿ ಬಾಲಾಜಿ (ಕ್ಲೇ ಮಾಡಲಿಂಗ್) ಹಾಗೂ ಸಾನ್ವಿ ಸುರೇಶ (ಭಕ್ತಿಗೀತೆ), ದ್ವಿತೀಯ ಬಹುಮಾನ: ಆರಾಧ್ಯ ಬಾಲಾಜಿ (ಆಶುಭಾಷಣ).
೫-೭ ನೇ ತರಗತಿ ವಿಭಾಗ
ಪ್ರಥಮ ಬಹುಮಾನ: ವೈಷ್ಣವಿ ಸಿದ್ಧಲಿಂಗ (ಕನ್ನಡ ಕಂಠಪಾಠ), ಕೃತಿಕಾ ರಾಜು (ಇಂಗ್ಲಿಷ ಕಂಠಪಾಠ), ಅನನ್ಯ ವೀರೇಶ (ಹಿಂದಿ ಕಂಠಪಾಠ), ಅಬೂಬ್ಕರ್ ಸಿದ್ದಿಕಿ ಆಸಿಮ್ ಇಕ್ಬಾಲ್ (ಅರೇಬಿಕ್ ಧಾರ್ಮಿಕ ಪಠಣ) ಪ್ರಜ್ಞಾ ರವೀಂದ್ರ (ದೇಶಭಕ್ತಿಗೇತೆ), ಕಿರಣ ಕಂಠೆಪ್ಪ (ಚಿತ್ರಕಲೆ), ವರುಣಕುಮಾರ ಸುರೇಶ (ಕ್ಲೇ ಮಾಡಲಿಂಗ್) ಹಾಗೂ ಅನನ್ಯ ರಾಘವೇಂದ್ರ (ಭಕ್ತಿಗೀತೆ). ದ್ವಿತೀಯ ಬಹುಮಾನ : ಸಾನ್ವಿ ಸಂತೋಷ (ಪ್ರಬಂಧ ರಚನೆ), ಚೇತನಾ ಮಲ್ಲಿಕಾರ್ಜುನ (ಅಭಿನಯ ಗೀತೆ), ಗೌರಿ ಸದಾನಂದ (ಕವನ ವಾಚನ), ತೃತೀಯ ಬಹುಮಾನ : ಬದರಿನಾಥ ವಿಠ್ಠಲ (ಸಂಸ್ಕೃತ ಧಾರ್ಮಿಕ ಪಠಣ), ಸಿಂಚನಾ ಮಲ್ಲಿಕಾರ್ಜುನ (ಆಶು ಭಾಷಣ).
೮-೧೦ನೇ ತರಗತಿ ವಿಭಾಗ
ಪ್ರಥಮ ಬಹುಮಾನ: ದಾನೇಶ್ವರಿ ಸಿದ್ದಪ್ಪ (ಇಂಗ್ಲಿಷ ಭಾಷಣ), ಕಾರ್ತಿಕ ವೆಂಕಟೇಶ (ಹಿಂದಿ ಭಾಷಣ) ಸುದೇಷ್ಣ ವಿಠಲ (ಸಂಸ್ಕೃತ ಧಾರ್ಮಿಕ ಪಠಣ), ಪ್ರೇರಣಾ ರುದ್ದಪ್ಪ (ಜಾನಪದ ಗೀತೆ), ಅರ್ಚನಾ ಶಿವಾಜಿ (ರಂಗೋಲಿ), ಪ್ರೇರಣಾ ರುದ್ದಪ್ಪ (ಭಾವಗೀತೆ), ಗುರುರಾಜ ತಂದೆ ಕಲ್ಲಪ್ಪ (ಆಶು ಭಾಷಣ), ದ್ವಿತೀಯ ಬಹುಮಾನ: ಸಿಂಚನಾ ರಾಘವೇಂದ್ರ (ಕನ್ನಡ ಭಾಷಣ), ವನ್ಯ ಶಿವರಾಜ ಗೊಬ್ಬೂರ್ (ಭರತನಾಟ್ಯ), ಈಶ್ವರಿ ಸಿದ್ಧರಾಮ (ಗಝಲ್ ಗಾಯನ), ಕೀರ್ತಿ ಮತ್ತು ತಂಡದವರು (ಖವ್ವಾಲಿ ಪ್ರಸ್ತುತಿ), ತೃತೀಯ ಬಹುಮಾನ: ಸುದೇಷ್ಣ ವಿಠ್ಠಲ್ (ಚರ್ಚಾ ಸ್ಪರ್ಧೆ), ಸೋನಾಕ್ಷಿ ಮತ್ತು ತಂಡ (ಜಾನಪದ ನೃತ್ಯ).
ಮಕ್ಕಳ ಸಾಧನೆಗೆ ಸಂಸ್ಥೆ ಅಧ್ಯಕ್ಷೆ ಸುವರ್ಣ ಭಗವತಿ, ಮುಖ್ಯಗುರು ಅಂಬಿಕಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.