ಉಡುಪಿ: ಇಂದಿನ ಸಾಧನೆ ಮುಂದಿನ ಯಶಸ್ಸಿಗೆ ಬುನಾದಿಯಾಗುತ್ತದೆ. ಪುರಸ್ಕಾರ ಕೇವಲ ಪ್ರಶಸ್ತಿಯಲ್ಲ. ಶ್ರಮಕ್ಕೆ ಮಾನ್ಯತೆ ಮತ್ತು ಮುಂದಿನ ಬೆಳವಣಿಗೆಗೆ ಪ್ರೇರಣೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಎಂಜಿಎಂ ಕಾಲೇಜಿನ ರವೀಂದ್ರ ಕಲಾಮಂಟಪದಲ್ಲಿ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್ ನವ್ಯಚೇತನ ವತಿಯಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಉಡುಪಿ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಶಿವಾನಂದ ನಾಯಕ್, ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದರೊಂದಿಗೆ ಉತ್ತಮ ಸಂಸತಿಯನ್ನು ಪಡೆದು ಉತ್ತಮ ಪ್ರಜೆಗಳಾಗಬೇಕು. ಉನ್ನತ ಹುದ್ದೆಯನ್ನು ಅಲಂಕರಿಸಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಟಿಎಂಎ ಪೈ ಕೌಶಲ್ಯ ಕೇಂದ್ರ ನಿರ್ದೇಶಕ ಟಿ. ರಂಗ ಪೈ ಮಾತನಾಡಿದರು. ಎಂಜಿಎಂ ಪಿಯು ಕಾಲೇಜಿನ ಪ್ರಾಚಾಯೆರ್ ಮಾಲತಿ ದೇವಿ, ನವ್ಯಚೇತನ ಟ್ರಸ್ಟ್ನ ಟ್ರಸ್ಟಿ ಅನಿತಾ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ರವಿಪ್ರಭ ಕಾರ್ಯಕ್ರಮ ನಿರೂಪಿಸಿ, ರಾಜಶಂಕರ ಸ್ವಾಗತಿಸಿದರು. ಅಮೃತ ಶ್ರೀ ಪ್ರಾರ್ಥಿಸಿದರು. ಉದಯ್ ಶೆಟ್ಟಿ ವಂದಿಸಿದರು.