ಜಿಲ್ಲೆ

ಸರ್ಕಾರಿ ಶಾಲೆ ಉಳಿಸಲು ಸಹಕಾರ : ಉಮಾ ಮಾಧವಿ ಆಶಯ

ಸೌಮ್ಯ ಆರ್

ಬೆಳ್ತಂಗಡಿ: ಶಾಲೆ ನಿರ್ಮಾಣಕ್ಕೆ ಸ್ಥಳ ದಾನ ಮಾಡಿದ ನಾರಾಯಣ ಹೆಬ್ಬಾರ್ ಅವರ ದೂರದರ್ಶಿತ್ವ ಮತ್ತು ವಿದ್ಯಾಭ್ಯಾಸಕ್ಕೆ ಊರವರು ನೀಡಿದ ಮಹತ್ವದ ಇತಿಹಾಸವಿರುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಊರವರು ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ ಎಂದು ನಿವೃತ್ತ ಶಿಕ್ಷಕಿ ಉಮಾ ಮಾಧವಿ ಹೇಳಿದರು.

ಕರಂಬಾರು ಸ.ಹಿ.ಪ್ರಾ. ಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಎಂ.ಶೆಟ್ಟಿ, ನಿವೃತ್ತ ಶಿಕ್ಷಕಿ ಸೇರಾಫಿನ್ ಡಿಸೋಜ, ನಿವೃತ್ತ ಎಸ್‌ಐ ಭಾರತಿ ಶೆಟ್ಟಿ, ಸ್ಥಳೀಯರಾದ ಸೀತಾರಾಮ ಹೆಬ್ಬಾರ್, ಕಿಶೋರ್ ಹೆಗ್ಡೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ ಎಂ.ಕೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್ ಕೇಳ್ಕರ್, ಶಿರ್ಲಾಲು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಮಾಧವ ಶಿರ್ಲಾಲು, ಗ್ರಾಪಂ ಸದಸ್ಯರಾದ ಜ್ಯೋತಿ, ಗೀತಾ, ಇಸಿಒ ಸಿದ್ದಲಿಂಗ ಸ್ವಾಮಿ, ಸಿಆರ್‌ಪಿ ಕಿರಣ್ ಕುಮಾರ್ ಕೆ.ಎಸ್, ವಿದ್ಯಾರ್ಥಿ ನಾಯಕಿ ರುಫೈದಾ ಉಪಸ್ಥಿತರಿದ್ದರು. ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಶುಭ ಹಾರೈಸಿದರು.

ಮುಖ್ಯಶಿಕ್ಷಕ ರಮೇಶ್ ಚೌಹಾಣ್ ಸ್ವಾಗತಿಸಿದರು. ಜ್ಞಾನದೀಪ ಶಿಕ್ಷಕ ಸದಾಶಿವ್ ವಂದಿಸಿದರು. ಕಿರಣ್ ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಶಾಲಾ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಪಾಲಕ ವೃಂದ ಹಾಗೂ ಗ್ರಾಮಸ್ಥರು ಸಹಕರಿಸಿದರು.