ಜಿಲ್ಲೆ

ಪ್ರಾಂತ ಸಾಧಾರಣ ಸಭಾ ಬೈಠಕ್​ ಇಂದಿನಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಾಧಾರಣ ಸಭಾ ಬೈಠಕ್​ ಅನ್ನು ಜು. 27, 28ರಂದು ಇಲ್ಲಿನ ರಾಮನಗರದ ಆದರ್ಶ ಪ್ರೌಢಶಾಲೆ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಾಂತ ಸಂಟನಾ ಕಾರ್ಯದರ್ಶಿ ಎಂ. ಉಮೇಶಕುಮಾರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾ ಭಾರತೀಯು ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರೇತರ ಶೈಕ್ಷಣಿಕ ಸಂಘಟನೆಯಾಗಿದೆ. ಕರ್ನಾಟಕದ 31 ಜಿಲ್ಲೆಗಳಲ್ಲಿ ವಿದ್ಯಾಭಾರತಿಯ ಸಂಟನೆಗಳಿದ್ದು, 561 ವಿದ್ಯಾಲಯಗಳು, 101 ಸಂಸ್ಕಾರ ಕೇಂದ್ರಗಳು ನಡೆಯುತ್ತಿವೆ. ಈ ಮೂಲಕ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜು. 27ರಂದು ಏರ್ಪಡಿಸಿರುವ ಕಾರ್ಯಕ್ರಮವನ್ನು ಮಿತ್ರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರತ್ನಾ ಪಾಟೀಲ ಉದ್ಘಾಟಿಸುವರು. ವಿದ್ಯಾ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯದರ್ಶಿ ಲಕ್ಷ್ಮಣರಾವ್​, ವಸಂತ ಮಾಧವ, ಭಾರತೀಯ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ವಿಜಯಾನಂದ ಶೆಟ್ಟಿ ಪಾಲ್ಗೊಳ್ಳುವರು. ವಿದ್ಯಾಭಾರತಿ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಅಧ್ಯಕ್ಷತೆ ವಹಿಸುವರು ಎಂದರು.
ವಿದ್ಯಾಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಣ್ಣ ಕಡಿವಾಲ, ಪ್ರಧಾನ ಕಾರ್ಯದರ್ಶಿ ಅಶೋಕ ನಾಯಕ, ಸುಹಾಸ ಆನೇಗುಂದಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.