ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣದ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಂಸದ ಪ್ರತಾಪ್ ಸಿಂಹ, ‘ಕ್ಯಾಮರಾ ಆಫ್ ಮಾಡಿ ಮಾತನಾಡುತ್ತೇನೆ’ ಎಂದು ಮಾಧ್ಯಮಪ್ರತಿನಿಧಿಗಳಿಗೆ ತಿಳಿಸಿದರು.
ಸಂಸತ್ ಭದ್ರತಾ ಲೋಪದ ಕುರಿತು ಇದುವರೆಗೆ ಪ್ರತಾಪ್ ಸಿಂಹ ಎಲ್ಲೂ ಸಹ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸುವಂತೆ ಮಾಧ್ಯಮ ಪ್ರತಿನಿಧಿಗಳು ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೇಳಿಕೊಂಡರು. ಆ ಸಂದರ್ಭ ಕ್ಯಾಮರಾ ಆಫ್ ಮಾಡುವಂತೆ ಅವರು ಸೂಚಿಸಿದರು.
ಕೆಲವು ಪತ್ರಕರ್ತರು ಕ್ಯಾಮರಾ ಆಫ್ ಮಾಡಲು ನಿರಾಕರಿಸಿದಾಗ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ ಸಿಡಿಮಿಡಿಗೊಂಡು ಹೊರನಡೆದರು.