ಜಿಲ್ಲೆ

ವಿಕಸಿತ ಭಾರತದ ಗುರಿ ಸಾಧನೆಗೆ ಮೋದಿ ಮತ್ತೆ ಪ್ರಧಾನಿಯಾಗಲಿ- ಎಂಎಲ್‌ಸಿ ಪ್ರತಾಪಸಿಂಹ ನಾಯಕ್

Mangaluru - Hariprasad Rai



ಮಂಗಳೂರು : ದೇಶದ ಅಭಿವೃದ್ಧಿ, ಭಾರತವನ್ನು ಜಗತ್ತಿನಲ್ಲೇ ನಂಬರ 1ರಾಷ್ಟ್ರವಾಗಿ ಕಟ್ಟಿ ಬೆಳೆಸುವ ದೂರದೃಷ್ಟಿ ಹೊಂದಿರುವ , ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತವನ್ನು 5ನೇ ಸ್ಥಾನಕ್ಕೇರಿಸಿದ ಸಮರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಮಾಡುವುದು ನಿಜವಾದ ದೇಶಪ್ರೇಮಿಗಳೆಲ್ಲರ ಹೊಣೆ ಎಂದು ಬಿಜೆಪಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಮತ್ತು ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು . ಸ್ವತಂತ್ರ ಭಾರತ ಶತಮಾನೋತ್ಸವ ಆಚರಿಸಿಕೊಳ್ಳುವ
2047ರ ವೇಳೆಗೆ ಸುಭದ್ರ, ಸಶಕ್ತ ಹಾಗೂ ವಿಕಸಿತ ಭಾರತವನ್ನು ರೂಪಿಸುವುದು ಮೋದಿ ಅವರ ಗುರಿಯಾಗಿದೆ. ವಿಕಸಿತ ಭಾರತದ ಗುರಿ ಸಾಧನೆಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.
ಹಿರಿಯ ಸಂಪನ್ಮೂಲ ವ್ಯಕ್ತಿ ಶಿಕಾರಿಪುರ ಕೃಷ್ಣಮೂರ್ತಿ ಅವರು ಬಿಜೆಪಿಯ ವಿವಿಧ ಪ್ರಕೋಷ್ಠಗಳಿಗೆ ಮಾರ್ಗದರ್ಶನ ಮಾಡಿದರು. ವ್ಯಾಪಾರಿಗಳ ಪ್ರಕೋಷ್ಠದ ಹಿರಿಯರಾದ ವಿಠಲದಾಸ್ ಪ್ರಭು, ಮೀನು ವ್ಯಾಪಾರಸ್ಥರಾದ ಸಂಧ್ಯಾ, ಅಸಂಘಟಿತ ಕಾರ್ಮಿಕರ ವಿಭಾಗದ ಸಚಿನ್ ಡಿ. ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಕೋಷ್ಠದ ರಾಜ್ಯ ಸಂಚಾಲಕ ಸಚಿನ್ ಗೌಡ, ಜಿಲ್ಲಾ ಸಂಚಾಲಕ ಪ್ರಸನ್ನ ದರ್ಭೆ, ಪ್ರಮುಖರಾದ ಜಯಂತ ಸಾಲಿಯಾನ್ ಉಪಸ್ಥಿತರಿದ್ದರು.