ಜಿಲ್ಲೆ

ಮಾಜಿ ಸಿಎಂ ಕುಮಾರಸ್ವಾಮಿ ಕಾಲಿಗೆ ನಮಸ್ಕರಿಸಿದ ಪ್ರತಾಪ್ ಸಿಂಹ; ಫೋಟೋ ವೈರಲ್​

Webdesk - Savina Naik

- 'ಕಷ್ಟಕಾಲದಲ್ಲಿ ಬೆನ್ನಿಗೆ ನಿಂತ ಕುಮಾರಣ್ಣಾ ನಿಮಗೆ ಥ್ಯಾಂಕ್ಸ್' ಎಂದು ಪ್ರತಾಪ್ ಸಿಂಹ

ಬೆಂಗಳೂರು: ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಹಾಕಿ ಬರೆದಿರುವ ಸಾಲುಗಳು ಭಾರೀ ವೈರಲ್ ಆಗಿದೆ.

ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಪ್ರತಾಪ್ ಸಿಂಹ, ಅವರ ಕಾಲಿಗೆ ನಮಸ್ಕರಿಸಿ ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ನಿಮಗೆ ಧನ್ಯವಾದ ಕುಮಾರಣ್ಣ ಎಂದು ಹೇಳಿದ್ದಲ್ಲದೆ ತಮ್ಮ ಭಾವನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಇಂದು ಬೆಳಗ್ಗೆ ಅವರ ಬಿಡದಿ ತೋಟದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರದ ಮುಂಬರುವ ಲೋಕಸಭೆ ಚುನಾವಣೆ ಸಂಬಂಧ ಹೀಗೆ ಹಲವು ವಿಷಯಗಳಿಗೆ ಸಂಸದ ಪ್ರತಾಪ್ ಸಿಂಹ ಸುದ್ದಿಯಲ್ಲಿರುತ್ತಾರೆ.ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡದ್ದು ಗೊತ್ತೇ ಇದೆ. ಮೈಸೂರು, ಮಂಡ್ಯ ಕ್ಷೇತ್ರಗಳ ಟಿಕೆಟ್ ಗೆ ಜೆಡಿಎಸ್ ಆಕಾಂಕ್ಷಿಯಾಗಿದೆ ಎಂಬ ವದಂತಿ ಕೂಡ ಇದೆ.