ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ತಾಯಿ ಚಾಮುಂಡಿಯನ್ನು ಹೊತ್ತು ಮೆರವಣಿಗೆ ಸಾಗಲು ಅಂಬಾರಿ ಹೊರುವ ಆನೆಯಾಗಿ ಕೊನೆಗೂ ಪ್ರಶಾಂತ ಆಯ್ಕೆಯಾಗಿದ್ದಾನೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ಈಗಾಗಲೇ ಗಜಪಡೆಯು ಸಾಂಸ್ಕೃತಿಕ ನಗರಿಯಲ್ಲಿ ತಾಲೀಮು ಸೇರಿದಂತೆ ಒಂದಷ್ಟು ಅಭ್ಯಾಸಗಳನ್ನು ಮುಗಿಸಿವೆ. ತಾಲೀಮು ಸಿದ್ಧತೆಗೂ ಮುನ್ನ ನಡೆಸಿದ ದಸರಾದಲ್ಲಿ ಪಾಲ್ಗೊಳ್ಳಲಿರುವ 9 ಆನೆಗಳ ತೂಕ ಮಾಪನದಲ್ಲಿ ಶ್ರೀಕಂಠ ಮೊದಲ ಸ್ಥಾನವನ್ನು ಅಲಂಕರಿಸಿದ್ದೇ ಆದರೂ ನಾಡದೇವತೆಯನ್ನು ಹೊರಲು ಪ್ರಶಾಂತನೇ ಗಟ್ಟಿಮುಟ್ಟು ಎಂದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ಆರಂಭದಲ್ಲಿ ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಿದ್ದ ಅರಣ್ಯ ಇಲಾಖೆ, ಅಂಬಾರಿ ಹೊರುತ್ತಿದ್ದ ಅಭಿಮನ್ಯುವನ್ನು ಕೈ ಬಿಡುವ ಮೂಲಕ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಹೊಸ ಆನೆಯೇ ಅಂಬಾರಿ ಹೊರಲಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಶ್ರೀಕಂಠ ಹೆಚ್ಚು ತೂಕ ಹೊಂದುವ ಮೂಲಕ ಪ್ರಥಮ ಸ್ಥಾನ ಪಡೆದಿರುವುದನ್ನು ನೋಡಿ, ನಾಡದೇವತೆಯನ್ನು ಶ್ರೀಕಂಠನೇ ಹೊರುವ ಸಾಧ್ಯತೆಯಿದೆ ಎಂದು ಊಹಿಸಲಾಗಿತ್ತು. ಆದರೆ, ಅಂಬಾರಿಯನ್ನು ಹೊತ್ತು ಸಾಗಲು ಪ್ರಶಾಂತನೇ ಬೆಸ್ಟ್ ಎಂದು ಈಗ ನಿರ್ಧರಿಸಲಾಗಿದೆ.
ಶ್ರೀಕಂಠ 5,790 ಕೆಜಿ (ಪ್ರಥಮ ಸ್ಥಾನ)
ಏಕಲವ್ಯ 5,600 ಕೆಜಿ
ಧನಂಜಯ 5,530 ಕೆಜಿ
ಮಹೇಂದ್ರ - 5,490 ಕೆಜಿ
ಪ್ರಶಾಂತ 5,205 ಕೆಜಿ
ಗೋಪಿ 5,170 ಕೆಜಿ
ಶ್ರೀರಾಮ 4,820 ಕೆಜಿ
ಲಕ್ಷ್ಮಿ 3,990 ಕೆಜಿ
ಕಾವೇರಿ 3,075 ಕೆಜಿ