ಚಿತ್ರದುರ್ಗ: ಆನೆಬಾಗಿಲು ಸಮೀಪದ ಸುವೃಷ್ಠಿ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಪ್ರಸನ್ನ ಗಣಪತಿ ಮೂರ್ತಿಯ ದರ್ಶನವನ್ನು ಭಾನುವಾರ ಕೇಂದ್ರದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಪಡೆದರು.
ಪ್ರಸನ್ನ ಗಣಪತಿ ಸೇವಾ ಸಮಿತಿಯ ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಗೆ ದೀಪ ಬೆಳಗಿಸಿ, ಪೂಜೆ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಗೋಪಾಲ್‌ರಾವ್ ಜಾದವ್, ಉಪಾಧ್ಯಕ್ಷರಾದ ನಾಗರಾಜ್ ಬೇದ್ರೆ, ರಾಜ್‌ಕುಮಾರ್, ಖಜಾಂಚಿ ಆನಂದ್, ನಿರ್ದೇಶಕರಾದ ಶಂಭು, ಸಿದ್ದೇಶ್, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಚ್.ಮೋಹನ್‌ಕುಮಾರ್ ಇತರರಿದ್ದರು.