ಭಟ್ಕಳ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೀಚರ್ ಎಜುಕೇಶನ್ (ಐಐಟಿಇ)ನಲ್ಲಿ ಭಟ್ಕಳ ಮೂಲದ ಪ್ರಸಾದ ಪ್ರಭು ಅವರನ್ನು ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಸಮಿತಿಯ (ಎಸ್‌ಜಿಆರ್‌ಸಿ) ವಿದ್ಯಾರ್ಥಿ ಸದಸ್ಯರನ್ನಾಗಿ ನೇಮಿಸಲಾಗಿದೆ
ಗುಜರಾತನ ಗಾಂಧಿನಗರದ ಐಐಟಿಇಯಲ್ಲಿ ಭೌತಶಾಸ್ತ್ರ ಮತ್ತು ಎಜುಕೇಶನ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಅವರನ್ನು ಉಪಕುಲಪತಿ ಪ್ರೊ. ಆರ್. ಸಿ. ಪಟೇಲ್ ಅವರು ನಾಮನಿರ್ದೇಶನ ಮಾಡಿ ಶಿಫಾರಸು ಹೊರಡಿಸಿದ್ದಾರೆ.
ಪ್ರಸಾದ ಪ್ರಭು ಅವರಿಗೆ 2023ರಲ್ಲಿ ಅತ್ಯುತ್ತಮ ಶಿಕ್ಷಕ ತರಬೇತಿ ವಿಭಾಗದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಚಾಣಕ್ಯ ಪ್ರಶಸ್ತಿ ದೊರಕಿತ್ತು. ಪ್ರಧಾನಿ ಮೋದಿಯವರ ’ವಿಕಸಿತ್ ಭಾರತ್’ ಪರಿಕಲ್ಪನೆಗೆ ಕೊಡುಗೆ ನೀಡಲು ಅಗತ್ಯವಾದ ಕೌಶಲಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ತಮ್ಮದೇ ಪರಿಕಲ್ಪನೆಯ ಮೆಟಾಮಾರ್ಫ್ ಇನ್ಸ್‌ಟಿಟ್ಯೂಟ್ ಆಫ್ ಸ್ಕಾಲರ್‌ಶಿಪ್ ಎಜುಕೇಶನ್ ಮೂಲಕ, ಅವರು ಶಶಕ್ತ ಶಿಕ್ಷಕ ವಿಕಸಿತ್ ಶಿಕ್ಷಕ (ಸಬಲೀಕೃತ ಶಿಕ್ಷಕ ಅಭಿವೃದ್ಧಿ ಹೊಂದಿದ ಶಿಕ್ಷಕ) ಎಂಬ ಧ್ಯೇಯವಾಕ್ಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.