ಕುಶಾಲನಗರ : ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಕುಶಾಲನಗರ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಶಾಖೆ, ಎನ್.ಎಸ್.ಎಸ್. ಘಟಕದ ವತಿಯಿಂದ ನಮನ ಸಲ್ಲಿಸಲಾಯಿತು. ಗೈಡ್ಸ್ ಕ್ಯಾಪ್ಟನ್ ಸಿ.ಎಂ.ಸುಲೋಚನಾ ಮಾತನಾಡಿ, ಮಕ್ಕಳಲ್ಲಿ ದೇಶಪ್ರೇಮ ರೂಢಿಸಲು ಶಿಕ್ಷಕರು ಮತ್ತು ಪಾಲಕರು ಪ್ರೇರಣೆ ನೀಡಬೇಕು ಎಂದರು. ಯೋಧ ಎಂ.ವಿ.ಪ್ರಾಂಜಲ್ ಅವರ ಕರ್ತವ್ಯ ನಿಷ್ಠೆ, ದೇಶ ಪ್ರೇಮ ಹಾಗೂ ತ್ಯಾಗ ಬಲಿದಾನದ ಮಹತ್ವ ಅರಿಯಬೇಕು ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ ಎಂ.ವಿ.ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮೌನಾಚರಣೆ ಮಾಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಎಂ.ಎಚ್. ನಜೀರ್ ಅಹ್ಮದ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಸುಜಾತಾ, ಬಿ.ಡಿ.ರಮ್ಯಾ, ಗೀತಾ, ಸೌಮ್ಯಾ ಇದ್ದರು.