ಮಂಗಳೂರು : ಪ್ರಣವ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಇದರ 9ನೇ ವಾರ್ಷಿಕ ಮಹಾಸಭೆ ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ಮಾತನಾಡಿ ‘ ಸಂಸ್ಥೆಯ ಕಳೆದ ವಾರ್ಷಿಕ ಅಂತ್ಯಕ್ಕೆ 2850 ಲಕ್ಷ ರೂ.ಠೇವಣಿ ಹೊಂದಿದ್ದು , 2600 ಲಕ್ಷ ರೂ.ಸಾಲ ನೀಡಿದೆ. 6000 ಸದಸ್ಯರ ರೂಪಾಯಿ 150 ಲಕ್ಷ ರೂ. ಪಾಲು ಬಂಡವಾಳ ಮತ್ತು 113 ಲಕ್ಷ ರೂ.ವಿವಿಧ ನಿಧಿ ಕ್ರೋಢೀಕರಣವಾಗಿದೆ ಎಂದರು.
ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 50.57 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಶೇ.10ರಷ್ಟು ಡಿವಿಡೆಂಡ್ ಸದಸ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ . ಪ್ರಧಾನ ಕಚೇರಿ ನಿರ್ಮಿಸಲು ನಿವೇಶನ ಖರೀದಿಗೆ ಮುಂದಾಗಿದ್ದು, ನಿಗದತ ಅವಧಿಯಲ್ಲಿ ಪ್ರಧಾನ ಕಚೇರಿ ಹೊಂದುವ ಗುರಿಯನ್ನು ಸಾಕಾರಗೊಳಿಸಲಾಗುವುದು ಎಂದರು.
ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್, ನಿವೃತ್ತ ಸೈನಿಕ ರಮೇಶ್ ನೂಜಿಪ್ಪಾಡಿ ಅವರನ್ನು ಗೌರವಿಸಲಾಯಿತು. ಪಿಗ್ಮಿ ಕಲೆಕ್ಟರ್ ಶ್ವೇತ ಕಾಮತ್ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಸೋಮಪ್ಪ ನಾಯ್ಕ್ ಅವರು ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರ ನೀಡಿದರು.
ನಿರ್ದೇಶಕರಾದ ದಯಾಸಾಗರ ಪೂಂಜಾ ,ರವೀಂದ್ರನಾಥ್, ರವಿಶಂಕರ್, ಪದ್ಮರಾಜ್ ಬಲ್ಲಾಳ್, ಭಗವಾನ್‌ದಾಸ್ಕೃಷ್ಣ ಕಾಮತ್, ಮಮತಾ ರಾವ್, ಜಯಲಕ್ಷ್ಮಿ ಚಂದ್ರಹಾಸ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಶೆಟ್ಟಿಗಾರ್ಉಪಸ್ಥಿತರಿದ್ದರು. ಉಪಾಧ್ಯಕ್ಷ ಜಿ.ಪ್ರಶಾಂತ ಪೈ ಸ್ವಾಗತಿಸಿ, ನಿರ್ದೇಶಕ ಸುಬ್ರಮಣ್ಯ ಭಟ್ ವಂದಿಸಿದರು. ಬಾಲಕೃಷ್ಣ ಪಚ್ಚನಾಡಿ
ಕಾರ್ಯಕ್ರಮ ನಿರೂಪಿಸಿದರು.