ಮೈಸೂರು: ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಜುಲೈ 28 ರಂದು ಸಂಜೆ 6.30ಕ್ಕೆ ‘ಪ್ರಮೀಳಾರ್ಜುನೀಯಂ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಎಂ.ಎಲ್.ಶ್ರೀಕಂಠೇಶಗೌಡ ಅವರ ರಚನೆಯ ಈ ನಾಟಕವನ್ನು ನಟನ ರೆಪರ್ಟರಿ ತಂಡ ಪ್ರಸ್ತುತಪಡಿಸಲಿದೆ. ನಾಟಕಕ್ಕೆ ಸಂಗೀತ ದಿಗ್ವಿಜಯ ಹೆಗ್ಗೋಡು ಅವರದು. ನಟನದ ಪ್ರಾಂಶುಪಾಲರಾದ ಮೇಘಾ ಸಮೀರಾ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.