ಜಿಲ್ಲೆ

ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ ರಮೇಶ್

Mangaluru - Shravan Kumar Nala

ಮಂಗಳೂರು: ಲಕ್ಷಕ್ಕೂ ಮಿಕ್ಕಿದ ಬೆಲೆಬಾಳುವ ಮೊಬೈಲ್‌ನ್ನು ಪತ್ರಿಕಾ ವಿತರಕರೊಬ್ಬರು ಪ್ರಾಮಾಣಿಕತೆಯಿಂದ ವಾರಿಸುದಾರರಿಗೆ ಹಿಂತುರುಗಿಸಿದ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಜೋಯೆಲ್ ಅವರು ಸುಮಾರು 1.25ಲಕ್ಷ ರೂ. ಬೆಲೆಬಾಳುವ ಐ-ಫೋನ್ ಕಳೆದುಕೊಂಡಿದ್ದರು. ಈ ವೇಳೆ ಮಂಗಳೂರಿನ ರೇಣುಕರಾಜ್ ನ್ಯೂಸ್ ಏಜೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ವಿತರಕ ರಮೇಶ್ ಎಂಬವರಿಗೆ ಈ ಮೊಬೈಲ್ ಸಿಕ್ಕಿರುತ್ತದೆ. ಮೊಬೈಲ್ ಸಿಕ್ಕಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಪ್ರಸಾರಮಾಡಿದ್ದರಿಂದ ವಾರಿಸುದಾರರ ಪತ್ತೆಗೆ ಸಹಕಾರಿಯಾಯಿತು. ವಿದ್ಯಾರ್ಥಿ ಜೋಯೆಲ್‌ಗೆ ಪ್ರಾಮಾಣಿಕತೆಯಿಂದ ಪತ್ರಿಕಾ ವಿತರಕ ರಮೇಶ್ ಅವರು ಮೊಬೈಲ್‌ನ್ನು ಹಸ್ತಾಂತರಿಸಿದರು.