ಜಿಲ್ಲೆ

ಸಮಾಜಕ್ಕಿದೆ ಪ್ರತಿಭೆ ಪೋಷಿಸುವ ಜವಾಬ್ದಾರಿ...

ಡಯಟ್ ನ ಡಾ.ಅಶೋಕ್​ ಕಾಮತ್​ ಅನಿಸಿಕೆ

ಬಾಲ ಪ್ರತಿಭೆಗಳಿಗೆ ಪ್ರಮಾ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಕ್ಕಳಲ್ಲಿರುವ ಪ್ರತಿಭೆಯನ್ನು ತಕ್ಷಣ ಗುರುತಿಸುವುದು ಕಷ್ಟ. ಆದರೆ, ಹೆಚ್ಚಿನ ಅಂಕ ಗಳಿಕೆ ಮಾತ್ರ ಪ್ರತಿಭೆಯಲ್ಲ. ಪ್ರತಿಭೆ ಗುರುತಿಸಿದ್ದರಿಂದ ಅಹಂಕಾರ ಬಂದು ಆ ಪ್ರತಿಭೆ ಅಲ್ಲಿಯೇ ಮೊಟಕುಗೊಳ್ಳಬಾರದು. ಅದನ್ನು ಪೋಷಿಸುವ ಜವಾಬ್ದಾರಿ ಪಾಲಕರಷ್ಟೇ ಸಮಾಜದ್ದೂ ಇದೆ ಎಂದು ಉಡುಪಿ ಜಿಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ (ಡಯಟ್​)ಯ ಉಪಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಹೇಳಿದರು.

ಮಣಿಪಾಲದಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್​ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನ.17ರಂದು ಆಯೋಜಿಸಿದ್ದ 10ನೇ ವರ್ಷದ ಪ್ರಮಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಶಸ್ತಿ ಪ್ರದಾನ

ಬಾಲಪ್ರತಿಭೆಗಳಾದ ಪಾದೆಕಲ್ಲು ವಿಭು ಭಟ್​ (ಸಂಸತ), ತನುಶ್ರೀ (ಯೋಗ), ಪ್ರಚೇತ್​ ರಾಮ್​ ಕಜೆ (ಗಮಕ ವಾಚನ), ಪ್ರದ್ಯುಮ್ನ ಭಾಗವತ್​ ಕೆ. (ಕೊಳಲು), ಗಾರ್ಗಿ ದೇವಿ (ಶಾಸ್ತ್ರೀಯ ನೃತ್ಯ) ಇವರಿಗೆ 'ಪ್ರಮಾ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸನ್ಮಾನಿಸಲ್ಪಟ್ಟ ಬಾಲಪ್ರತಿಭೆಗಳು ತಮ್ಮ ಕ್ಷೇತ್ರದ ಪರಿಣತಿಯ ಕುರಿತು ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮಾ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್​ನ ಅಧ್ಯಕ್ಷೆ ದೇವಕಿ ಕೆ. ಭಟ್​, ಪದಾಧಿಕಾರಿಗಳಾದ ಡಾ. ಬಾಲಚಂದ್ರ ಆಚಾರ್​, ವಿದುಷಿ ಪವನಾ ಬಿ. ಆಚಾರ್​ ಉಪಸ್ಥಿತರಿದ್ದರು.

ಟ್ರಸ್ಟ್​ನ ಡಾ. ಅನಸೂಯಾದೇವಿ ಸ್ವಾಗತಿಸಿದರು. ನಮ್ರತಾ ರಾವ್​ ಕಾರ್ಯಕ್ರಮ ನಿರ್ವಹಿಸಿದರು.